ಬೀದಿಯ ಬಸವಂಗೆ ದೇವಾಲಯದ
ಪಶುವಿಂಗೆ ಹುಟ್ಟಿದ ಕರು,
ಬಸವಗಳಪ್ಪುವೆ, ಲಿಂಗಮುದ್ರೆಯನೊತ್ತದನ್ನಕ್ಕ?
ಭಕ್ತಂಗೆ ಭಕ್ತೆಗೆ ಹುಟ್ಟಿದರೆಂದರೆ
ಬರಿಯ ಗುರುಕಾರುಣ್ಯದಲ್ಲಿ ಭಕ್ತರಪ್ಪರೆ,
ಅಂಗದ ಮೇಲೆ ಲಿಂಗವಿಲ್ಲದನ್ನಕ್ಕ?
ಅವರನೊಳಗಿಟ್ಟುಕೊಂಡು ನಡೆದರೆ
ಭಕ್ತಿಹೀನರೆನಿಸಿತ್ತು, ಕೂಡಲಚೆನ್ನಸಂಗನ ವಚನ.
Transliteration Bīdiya basavaṅge dēvālayada
paśuviṅge huṭṭida karu,
basavagaḷappuve, liṅgamudreyanottadannakka?
Bhaktaṅge bhaktege huṭṭidarendare
bariya gurukāruṇyadalli bhaktarappare,
aṅgada mēle liṅgavilladannakka?
Avaranoḷagiṭṭukoṇḍu naḍedare
bhaktihīnarenisittu, kūḍalacennasaṅgana vacana.