•  
  •  
  •  
  •  
Index   ವಚನ - 209    Search  
 
ಶಿವಜನ್ಮ ಶಿವಕುಲಜನಾಗಿ ಶಿವಶರಣರ ಮನೆಯ ಒಕ್ಕುದ ಕೊಂಬುದು. ಭವಭಾರಿಯ ಮನೆಯಲು ಲಿಂಗಾರ್ಚನೆಯ ಮಾಡಲಾಗದು. ಭವಿವಿರಹಿತಂ, ಭವಿಪಾಕವ ತನ್ನ ಲಿಂಗಕ್ಕೆ ಕೊಟ್ಟಡೆ ರೌರವಂ ನರಕ ನೋಡಾ. "ಅಸಂಸ್ಕಾರಿಕೃತಂ ಪಾಕಂ ಶಂಭೋರ್ನೈವೇದ್ಯಮೇವ ನ| ಅನಿವೇದ್ಯಂ ತು ಭುಂಜೀಯಾನ್ನರಕೇ ಕಾಲಮಕ್ಷಯನಮ್"|| ಇದು ಕಾರಣ ಕೂಡಲಚೆನ್ನಸಂಗಯ್ಯಾ, ಭವಿಯ ಸಂಗ ಪುನರಪಿ ಜನ್ಮ.
Transliteration Śivajanma śivakulajanāgi śivaśaraṇara maneya okkuda kombudu. Bhavabhāriya maneyalu liṅgārcaneya māḍalāgadu. Bhavivirahitaṁ, bhavipākava tanna liṅgakke koṭṭaḍe rauravaṁ naraka nōḍā. Asanskārikr̥taṁ pākaṁ śambhōrnaivēdyamēva na| anivēdyaṁ tu bhun̄jīyānnarakē kālamakṣayanam|| idu kāraṇa kūḍalacennasaṅgayyā, bhaviya saṅga punarapi janma.