ಕಾಯ ಜೀವವಾಗಿ,
ಜೀವ ಕಾಯವಾಗಿ
ಕಾಯ ಜೀವವ ಮುಟ್ಟದು,
ಜೀವ ಕಾಯವ ಮುಟ್ಟದು,
ಸಂಬಂಧಸಂಭ್ರಮವಡಗದು,
ಲಿಂಗವ ಪ್ರಾಣವ ಮುಟ್ಟದು,
ಪ್ರಾಣಲಿಂಗವ ತೋರದು,
ಪ್ರಸಾದವಿನ್ನೆಲ್ಲಿಯದೋ?
ವಾಯಕ್ಕೆ ವಾಯ!
ಕೂಡಲಚೆನ್ನಸಂಗನೆಂಬುದು ವಾಯ.
Transliteration Kāya jīvavāgi,
jīva kāyavāgi
kāya jīvava muṭṭadu,
jīva kāyava muṭṭadu,
sambandhasambhramavaḍagadu,
liṅgava prāṇava muṭṭadu,
prāṇaliṅgava tōradu,
prasādavinnelliyadō?
Vāyakke vāya!
Kūḍalacennasaṅganembudu vāya.