•  
  •  
  •  
  •  
Index   ವಚನ - 242    Search  
 
ಶಿವಸಂಸ್ಕಾರಿಯಾಗಿ ಲಿಂಗವೆ ಪ್ರಾಣವಾಗಿದ್ದ ಬಳಿಕ ಅಲ್ಲಲ್ಲಿಗೆ ಹರಿಯಲಾಗದು. ಪ್ರಾಣಲಿಂಗಸಂಬಂಧಿಗೆ ಅದು ಪಥವಲ್ಲ. "ಅಸಂಸ್ಕಾರಿಕೃತಂ ಪಾಕಂ ಶಂಭೋರ್ನೈವೇದ್ಯಮೇವ ನ| ಅನರ್ಪಿತಂ ತು ಭುಂಜೀಯಾತ್ ಪ್ರಸಾದೋ ನಿಷ್ಫಲೋ ಭವೇತ್"|| ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯ ನಾಯಕನರಕದಲಿಕ್ಕುವನಾಗಿ.
Transliteration Śivasanskāriyāgi liṅgave prāṇavāgidda baḷika allallige hariyalāgadu. Prāṇaliṅgasambandhige adu pathavalla. Asanskārikr̥taṁ pākaṁ śambhōrnaivēdyamēva na| anarpitaṁ tu bhun̄jīyāt prasādō niṣphalō bhavēt|| endudāgi, idu kāraṇa kūḍalacennasaṅgayya nāyakanarakadalikkuvanāgi.