•  
  •  
  •  
  •  
Index   ವಚನ - 286    Search  
 
ಲಿಂಗಪ್ರಸಾದ ಸೋಂಕಿನಿಂದ ಇರುಹೆಗೆ ರುದ್ರತ್ವವಾಯಿತ್ತು. ಲಿಂಗಪ್ರಸಾದ ಸೋಂಕಿನಿಂದ ಬಿಬ್ಬಬಾಚಯ್ಯ ಸ್ವಯಲಿಂಗವಾದ. ಲಿಂಗಪ್ರಸಾದ ಸೋಂಕಿನಿಂದ ವಿಷವನಮೃತವ ಮಾಡಿ ಬಸವಣ್ಣ ಮೆರೆದ. "ಲಿಂಗಪ್ರಸಾದಃ ಸಂಗ್ರಾಹ್ಯಸ್ಸರ್ವದೇವಾನುಚೇಷ್ಟಿತಃ| ತೇನ ಪ್ರಸಾದಮಪ್ರಾಪ್ಯ ಭವಾನ್ಮುಕ್ತಿಃ ಕಥಂ ಭವೇತ್"|| ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಸಾದದ ಮಹಿಮೆ ವೇದವಾಕ್ಯವ ಮೀರಿದುದನೇನೆಂಬೆ!
Transliteration Liṅgaprasāda sōṅkininda iruhege rudratvavāyittu. Liṅgaprasāda sōṅkininda bibbabācayya svayaliṅgavāda. Liṅgaprasāda sōṅkininda viṣavanamr̥tava māḍi basavaṇṇa mereda. Liṅgaprasādaḥ saṅgrāhyas'sarvadēvānucēṣṭitaḥ| tēna prasādamaprāpya bhavānmuktiḥ kathaṁ bhavēt|| idu kāraṇa, kūḍalacennasaṅgayyā, nim'ma prasādada mahime vēdavākyava mīridudanēnembe!