•  
  •  
  •  
  •  
Index   ವಚನ - 303    Search  
 
ಸತ್ವದ ಉದಯವ ಗುರುವಿಂಗಿತ್ತು, ರಜದ ಉದಯವ ಲಿಂಗಕ್ಕಿತ್ತು, ತಮದ ಉದಯವ [ಜಂಗಮಕ್ಕಿತ್ತು]. ಈ ತ್ರಿವಿಧದುದಯವ ಪ್ರಸಾದಕ್ಕಿತ್ತು, ಇಂತಪ್ಪ ಲಿಂಗಸಂಗಿಗಳಲ್ಲಿ ಸೇರಿಸಯ್ಯಾ. ಪಂಚೀಕೃತ ಪಂಚ ಪಂಚಕವ ಕಳೆದು ಕೂಡಲಚೆನ್ನಸಂಗಯ್ಯ ಎನ್ನ ಪ್ರಾಣಲಿಂಗವಾಗಿ, ಉಳಿದ ಸುಖಂಗಳು ಕಾಡಲಮ್ಮವು ಬಳಿಕ.
Transliteration Satvada udayava guruviṅgittu, rajada udayava liṅgakkittu, tamada udayava [jaṅgamakkittu]. Ī trividhadudayava prasādakkittu, intappa liṅgasaṅgigaḷalli sērisayyā. Pan̄cīkr̥ta pan̄ca pan̄cakava kaḷedu kūḍalacennasaṅgayya enna prāṇaliṅgavāgi, uḷida sukhaṅgaḷu kāḍalam'mavu baḷika.