ಲಿಂಗ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ,
ಜಂಗಮ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ,
ಪ್ರಸಾದ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ,
ಅರ್ಪಿತ ಸಂಕಲ್ಪಿತ ಭಾವಾರ್ಪಿತವ ಮಾಡಬಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣ.
TransliterationLiṅga mukhadalli banda prasādava prasādavembe,
jaṅgama mukhadalli banda prasādava prasādavembe,
prasāda mukhadalli banda prasādava prasādavembe,
arpita saṅkalpita bhāvārpitava māḍaballa,
kūḍalacennasaṅgā nim'ma śaraṇa.
ವಚನಕಾರ ಮಾಹಿತಿ
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.