•  
  •  
  •  
  •  
Index   ವಚನ - 345    Search  
 
ಭವಿಗೆ ಇಕ್ಕಲಾಗದೆಂಬ ಸಂಬಂಧಿಗಳು ಮರಳಿ ಭವಿಗಿಕ್ಕಿದರೆ, ಭಾಷೆಗೆ ವ್ರತಗೇಡಿ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಭವಿಗಳು ನಿಮ್ಮನಾವ[ರಿಸಿ]ಕೊಂಡಿರಲು ಮತ್ತೆ ಭವಿಗಿಕ್ಕೆನೆಂಬ ಪರಿಯೆಂತೋ? ಬಹಿರಂಗದ ಭವಿಯ ಕಳೆವುದು [ಅಭ್ಯಾಸವಲ್ಲದೆ ನಿಜವಲ್ಲ], ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಅಂತರಂಗದ ಭವಿಯ ಕಳೆವ ಶರಣನಪೂರ್ವ.
Transliteration Bhavige ikkalāgademba sambandhigaḷu maraḷi bhavigikkidare, bhāṣege vratagēḍi. Kāma krōdha lōbha mōha mada matsaravemba bhavigaḷu nim'manāva[risi]koṇḍiralu matte bhavigikkenemba pariyentō? Bahiraṅgada bhaviya kaḷevudu [abhyāsavallade nijavalla], idu kāraṇa kūḍalacennasaṅgayyanalli antaraṅgada bhaviya kaḷeva śaraṇanapūrva.