ಕಾಯ ಲಿಂಗವ ಮುಟ್ಟಿದರೆ,
ಕಾಯ ಲಿಂಗಭಕ್ತನಾಗಿರಬೇಕು.
ನಯನ ಲಿಂಗವ ಮುಟ್ಟಿದರೆ,
ನಯನ ಲಿಂಗಭಕ್ತನಾಗಿರಬೇಕು.
ಶ್ರೋತ್ರ ಲಿಂಗವ ಮುಟ್ಟಿದರೆ,
ಶ್ರೋತ್ರ ಲಿಂಗಭಕ್ತನಾಗಿರಬೇಕು.
ಭಾವ ಲಿಂಗವ ಮುಟ್ಟಿದರೆ,
ಭಾವ ಲಿಂಗಭಕ್ತನಾಗಿರಬೇಕು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಸರ್ವಜೀವದಯಾಪಾರಿಯಾಗಿರಬೇಕು.
Transliteration Kāya liṅgava muṭṭidare,
kāya liṅgabhaktanāgirabēku.
Nayana liṅgava muṭṭidare,
nayana liṅgabhaktanāgirabēku.
Śrōtra liṅgava muṭṭidare,
śrōtra liṅgabhaktanāgirabēku.
Bhāva liṅgava muṭṭidare,
bhāva liṅgabhaktanāgirabēku.
Idu kāraṇa kūḍalacennasaṅgayyā
nim'ma śaraṇa sarvajīvadayāpāriyāgirabēku.