•  
  •  
  •  
  •  
Index   ವಚನ - 491    Search  
 
ಅಂಗಸಂಬಂಧ ಲಿಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು. ಲಿಂಗಸಂಬಂಧ ಅಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು, ಇದಾವ ಸಂಬಂಧವಿಲ್ಲದೆ ಆಶ್ರಯ ಗುಣದಿಂದ ಲಾಂಛನವಾದುದೇನಯ್ಯಾ? "ಲಾಂಛನಂ ದುರ್ಲಭಂ ಚೈವ ಸ್ವಾನುಭಾವೋಹ್ಯತಃ ಪರಮ್| ದುರ್ಲಭಂ ಶಿವತತ್ತ್ವಂ ಚ ಪ್ರಾಣಲಿಂಗಮತಃ ಪರಮ್"|| ಎಂದುದಾಗಿ, ಆಶ್ರಯದ ಪರಿಯಲ್ಲ; ನಿರಾಶ್ರಯದ ಪರಿಯಲ್ಲ, ಲಿಂಗಸಾರಾಯ ಶರಣ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಮಹದನುಭಾವ, ನಿರ್ಗಮನವಾದ ಬಳಿಕ.
Transliteration Aṅgasambandha liṅgavāda baḷika liṅgōpajīviyāgirabēku. Liṅgasambandha aṅgavāda baḷika liṅgōpajīviyāgirabēku, idāva sambandhavillade āśraya guṇadinda lān̄chanavādudēnayyā? Lān̄chanaṁ durlabhaṁ caiva svānubhāvōhyataḥ param| durlabhaṁ śivatattvaṁ ca prāṇaliṅgamataḥ param|| endudāgi, āśrayada pariyalla; nirāśrayada pariyalla, liṅgasārāya śaraṇa. Idu kāraṇa, kūḍalacennasaṅgayyanalli mahadanubhāva, nirgamanavāda baḷika.