•  
  •  
  •  
  •  
Index   ವಚನ - 520    Search  
 
ಸುಳಿವ ಜಂಗಮ ಕಾಲಿಲ್ಲದೆ ಸುಳಿಯಬೇಕು, ಮಾಡುವ ಭಕ್ತ ಕೈಯಿಲ್ಲದೆ ಮಾಡಬೇಕು. ಸುಳಿವ ಜಂಗಮಕ್ಕೆ ಕಾಲಿದ್ದರೇನು? ಅನ್ಯರ ಮನೆಯ ಹೊಗದಿದ್ದರೆ ಸಾಕು. "ಜಂಗಮಸ್ಯಾಗಮೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್| ಅನ್ಯಸ್ಯ ಚೇತ್ ಗೃಹಂ ಯಾತಿ ಸದ್ಯೋ ಗೋಮಾಂಸಭಕ್ಷಣಂ"|| ಮಾಡುವ ಭಕ್ತಂಗೆ ಕೈಯಿದ್ದರೇನು? ಲಿಂಗಜಂಗಮಕ್ಕಲ್ಲದೆ ಮಾಡದಿದ್ದರೆ ಸಾಕು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಶರಣಸಂಬಂಧವಪೂರ್ವ.
Transliteration Suḷiva jaṅgama kālillade suḷiyabēku, māḍuva bhakta kaiyillade māḍabēku. Suḷiva jaṅgamakke kāliddarēnu? An'yara maneya hogadiddare sāku. Jaṅgamasyāgamō nāsti bhaktasya gr̥hamācarēt| an'yasya cēt gr̥haṁ yāti sadyō gōmānsabhakṣaṇaṁ|| māḍuva bhaktaṅge kaiyiddarēnu? Liṅgajaṅgamakkallade māḍadiddare sāku. Idu kāraṇa, kūḍalacennasaṅgayyanalli śaraṇasambandhavapūrva.