•  
  •  
  •  
  •  
Index   ವಚನ - 528    Search  
 
ಆಚಾರ ಕಪ್ಪರ ಸೊಮ್ಮುಸಂಬಂಧವ ತೋರಿ ಬೇಡುವುದು. ವಿಚಾರ ಕಪ್ಪರ ಲಾಂಛನವ ತೋರಿ ಬೇಡುವುದು. ಅವಿಚಾರ ಕಪ್ಪರ ಸೊಮ್ಮುಸಂಬಂಧವ, ನೇಮಶೀಲವ ಮೀರಿ ಬೇಡುವುದಾಗಿ ನಿರುಪಾಧಿಕವಯ್ಯಾ ಕೂಡಲಚೆನ್ನಸಂಗಮದೇವಾ.
Transliteration Ācāra kappara som'musambandhava tōri bēḍuvudu. Vicāra kappara lān̄chanava tōri bēḍuvudu. Avicāra kappara som'musambandhava, nēmaśīlava mīri bēḍuvudāgi nirupādhikavayyā kūḍalacennasaṅgamadēvā.