•  
  •  
  •  
  •  
Index   ವಚನ - 533    Search  
 
ಹರಂಗೆಯೂ ತನಗೆಯೂ ಏಕೋಭಾಜನವೆಂಬರು, ಗುರುಲಿಂಗ ಬಂದರೆ ಮತ್ತೊಂದು ಭಾಜನವ ತನ್ನಿಯೆಂಬ[ರಿಗೆ] ಲಿಂಗವುಂಟೆ? ಲಿಂಗವ ಮುಟ್ಟಿ ಹಿಂಗುವ ಭವಿಗಳಿಗೆ ಲಿಂಗವುಂಟೆ? ಲಿಂಗ ಜಂಗಮವನು ಮಹಾಪ್ರಸಾದವನು ಏಕವ ಮಾಡಿದವಂಗಲ್ಲದೆ. ಏಕೋಭಾಜನವಿಲ್ಲ ಕೂಡಲಚೆನ್ನಸಂಗಮದೇವಾ.
Transliteration Haraṅgeyū tanageyū ēkōbhājanavembaru, guruliṅga bandare mattondu bhājanava tanniyemba[rige] liṅgavuṇṭe? Liṅgava muṭṭi hiṅguva bhavigaḷige liṅgavuṇṭe? Liṅga jaṅgamavanu mahāprasādavanu ēkava māḍidavaṅgallade. Ēkōbhājanavilla kūḍalacennasaṅgamadēvā.