ದೇಹಿಯಲ್ಲ ನಿರ್ದೇಹಿಯಲ್ಲ,
ಬೋಧಕನಲ್ಲ ನಿರ್ಬೋಧಕನಲ್ಲ,
ಕಾಮಿಯಲ್ಲ, ನಿಃಕಾಮಿಯಲ್ಲ,
ಆಸೆವಿಡಿದು ಬಂದ ಆಮಿಷನಲ್ಲ.
ಅವಗುಣವಿಲ್ಲದ ನಿರ್ಗುಣಿ ನಿರಂತರ,
ಕೂಡಲಚೆನ್ನಸಂಗನ ಶರಣ ನೋಡಯ್ಯಾ.
Transliteration Dēhiyalla nirdēhiyalla,
bōdhakanalla nirbōdhakanalla,
kāmiyalla, niḥkāmiyalla,
āseviḍidu banda āmiṣanalla.
Avaguṇavillada nirguṇi nirantara,
kūḍalacennasaṅgana śaraṇa nōḍayyā.