•  
  •  
  •  
  •  
Index   ವಚನ - 566    Search  
 
ಭಕ್ತನಾದೆನೆಂದು ನಚ್ಚದಿರೊ ಅಣ್ಣಾ, ನಿನ್ನ ಕರಣಾದಿಗಳ ಭಕ್ತರ ಮಾಡಯ್ಯಾ, ಹಸಿವು ತೃಷೆ ವಿಷಯ ಘನ ನೋಡಯ್ಯಾ. ಇವು, ಮನ ಸಹಿತ ಮಜ್ಜನಕ್ಕೆರೆದರೆ ಹಿಂದಣ ಭವಿಸಂಗ ಹಿಂಗದು ನೋಡಾ ಮೃತಕರೋಟಿ ವರ್ತಮಾನರಿಬ್ಬರು ಅವರ ತಮ್ಮನೊಬ್ಬ- ಇಂತೀ ಮೂವರ ಹಿಂಗಿಸಿ ಮಜ್ಜನಕ್ಕೆರೆದು ಲಿಂಗಸಂಗಿಯಾಗಿಪ್ಪ ಕೂಡಲಚೆನ್ನಸಂಗಾ, ನಿಮ್ಮ ಶರಣ.
Transliteration Bhaktanādenendu naccadiro aṇṇā, ninna karaṇādigaḷa bhaktara māḍayyā, hasivu tr̥ṣe viṣaya ghana nōḍayyā. Ivu, mana sahita majjanakkeredare hindaṇa bhavisaṅga hiṅgadu nōḍā mr̥takarōṭi vartamānaribbaru avara tam'manobba- intī mūvara hiṅgisi majjanakkeredu liṅgasaṅgiyāgippa kūḍalacennasaṅgā, nim'ma śaraṇa.