ನದಿ ಕೂಪ ತಟಾಕ ಜಲದಲ್ಲಿ ಕನ್ನವನ್ನಿಕ್ಕಿ
ಉದಕವ ತಂದು,
ಮಜ್ಜನಕ್ಕೆರೆವವರು ಸುಯಿಧಾನಿಗಳಪ್ಪರೆ?
ಪಾಕದಲ್ಲಿ ಭವಿಪಾಕ ಪರಪಾಕವೆಂದು ಭುಂಜಿಸುವ
ಉದರಪೋಷಕರೆಲ್ಲಾ ಶೀಲವಂತರಪ್ಪರೆ? ಅಲ್ಲ.
ಆಸೆಯರತು, ವ್ಯಸನ ಬೆಂದು,
ವ್ಯಾಪ್ತಿಗಳೆಲ್ಲವು ತಲ್ಲೀಯವಾಗಿ,
ತನುಗುಣಾದಿಗಳೆಲ್ಲಾ ಸಮಾಪ್ತಿಯಾದಡೆ
ಕೂಡಲಚೆನ್ನಸಂಗನಲ್ಲಿ ಶೀಲವಂತರೆಂಬೆ.
Transliteration Nadi kūpa taṭāka jaladalli kannavannikki
udakava tandu,
majjanakkerevavaru suyidhānigaḷappare?
Pākadalli bhavipāka parapākavendu bhun̄jisuva
udarapōṣakarellā śīlavantarappare? Alla.
Āseyaratu, vyasana bendu,
vyāptigaḷellavu tallīyavāgi,
tanuguṇādigaḷellā samāptiyādaḍe
kūḍalacennasaṅganalli śīlavantarembe.