ಭಕ್ತನೆ ಕುಲಜನೆಂಬರು, ಯುಕ್ತಿಯಲ್ಲಿ ವಿಚಾರಿಸರು ನೋಡಾ!
ವ್ಯಾಕುಳ ನಿರಾಕುಳವೆಂಬ ಎರಡು ಕುಳ ನೋಡಾ!
ವ್ಯಾಕುಳವೆ ಭವ, ನಿರಾಕುಳವೆ ನಿರ್ಭವ.
ವ್ಯಾಕುಳವೆ ಪಾಪ, ನಿರಾಕುಳವೆ ಪುಣ್ಯ.
ವ್ಯಾಕುಳವೆ ಭವಿ, ನಿರಾಕುಳವೆ ಭಕ್ತ.
"ಭವೇ ಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ|
ಶಿವಬೀಜಂ ತಥಾ ಜ್ಞಾನಂ ಜ್ಞಾನಂ ತ್ರೈಲೋಕ್ಯ ದುರ್ಲಭಮ್"||
ಎಂಬುದಾಗಿ,
ಜ್ಞಾನಿಗೆ ಕತ್ತಲೆಯಿಲ್ಲ, ಅಜಾತಂಗೆ ಹೊಲೆಯಿಲ್ಲ,
ಕುಲಾಧೀಶ, ಕೂಡಲಚೆನ್ನಸಂಗಾ.
Transliteration Bhaktane kulajanembaru, yuktiyalli vicārisaru nōḍā!
Vyākuḷa nirākuḷavemba eraḍu kuḷa nōḍā!
Vyākuḷave bhava, nirākuḷave nirbhava.
Vyākuḷave pāpa, nirākuḷave puṇya.
Vyākuḷave bhavi, nirākuḷave bhakta.
Bhavē bījaṁ tathā bhaktirbhaktibījaṁ tathā śivaḥ|
śivabījaṁ tathā jñānaṁ jñānaṁ trailōkya durlabham||
embudāgi,
jñānige kattaleyilla, ajātaṅge holeyilla,
kulādhīśa, kūḍalacennasaṅgā.