•  
  •  
  •  
  •  
Index   ವಚನ - 609    Search  
 
ಧರೆಗೆ ಸೂತಕವುಂಟೆ? ವಾರಿಧಿಗೆ ಹೊಲೆಯುಂಟೆ? ಉರಿವ ಅನಲಂಗೆ ಜಾತಿಭೇದವುಂಟೆ? ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ? ಆಕಾಶಕ್ಕೆ ದಾರಿ ಮೇರೆಯುಂಟೆ? [ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು? ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗೆ.
Transliteration Dharege sūtakavuṇṭe? Vāridhige holeyuṇṭe? Uriva analaṅge jātibhēdavuṇṭe? Haridu carisuva anilaṅge sīmeyuṇṭe? Ākāśakke dāri mēreyuṇṭe? [Inita]rindalodagida ghaṭavanu āru hollembaru? Sāravu karma, kūḍalacennasaṅgamadēvā nim'ma śaraṇaṅge.