ಗುರುವುಳ್ಳಾತ ಶಿಷ್ಯನಲ್ಲ, ಪ್ರಸಾದವುಳ್ಳಾತ ಭಕ್ತನಲ್ಲ.
ಲಿಂಗೈಕ್ಯನಾದರೆ ಸ್ಥಾವರಲಿಂಗ
ವಿರೋಧಿಯಾಗಿರಬೇಕು.
ಕಾಯಕ್ಕೆ ಸಾಹಿತ್ಯವೆಲ್ಲಿಯಾದರೆಯೂ ಉಂಟು,
ಆತ್ಮಸಾಹಿತ್ಯವಪೂರ್ವ.
ಆಚಾರಸಾಹಿತ್ಯ ಲೋಕ, ಅನಾಚಾರಸಾಹಿತ್ಯ ಶರಣ,
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ನಾನು ಅನಾಚಾರಿಯಾದ ಕಾರಣ
ಎನಗೆ ಪ್ರಸಾದ ನೆಲೆಗೊಂಡಿತ್ತು.
Transliteration Guruvuḷḷāta śiṣyanalla, prasādavuḷḷāta bhaktanalla.
Liṅgaikyanādare sthāvaraliṅga
virōdhiyāgirabēku.
Kāyakke sāhityavelliyādareyū uṇṭu,
ātmasāhityavapūrva.
Ācārasāhitya lōka, anācārasāhitya śaraṇa,
idu kāraṇa, kūḍalacennasaṅgayyā
nānu anācāriyāda kāraṇa
enage prasāda nelegoṇḍittu.