•  
  •  
  •  
  •  
Index   ವಚನ - 629    Search  
 
ಲಿಂಗವನು ಭವಿಯೆಂಬೆ, ಜಂಗಮನು ಭವಿಯೆಂಬೆ, ಪ್ರಸಾದವನುಭವಿಯೆಂಬೆ, ಅದೇನು ಕಾರಣ ಭವಿಯೆಂಬೆ? ಈ ತ್ರಿವಿಧಕ್ಕೆ ಹಸ್ತಮಸ್ತಕಸಂಯೋಗವಿಲ್ಲದ ಕಾರಣ ಭವಿಯೆಂಬೆ. ಇದು ಕಾರಣ ಈ ತ್ರಿವಿಧವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
Transliteration Liṅgavanu bhaviyembe, jaṅgamanu bhaviyembe, prasādavanubhaviyembe, adēnu kāraṇa bhaviyembe? Ī trividhakke hastamastakasanyōgavillada kāraṇa bhaviyembe. Idu kāraṇa ī trividhavanu kūḍalacennasaṅgā nim'ma śaraṇa balla.