•  
  •  
  •  
  •  
Index   ವಚನ - 631    Search  
 
ಸಚರಾಚರದೊಳಗಿಪ್ಪ ಲಾಂಛನಧಾರಿಗಳೆಯ್ದೆ ಸಯದಾನವೆ ಪ್ರಸಾದವೆಂದು ಹೆಸರಿಟ್ಟುಕೊಂಡುಂಬರು, "ಲೋಕ ಮೇವೋಚ್ಯತೇ ಲಿಂಗಂ ಲಿಂಗಮೇವೋಚ್ಯತೇ ಶಿವಃ| ತಲ್ಲಿಂಗಧಾರಣಾಚ್ಛಿಷ್ಯಃ [ಪುನರ್]ಜನ್ಮವಿವರ್ಜಿತಃ"|| ಇಂತು ಪಕೃತ್ಯಾದಿಗಳ ಗುಣಂಗಳು ಪಲ್ಲಟವಾದ ಕಾರಣ. ಕೂಡಲಚೆನ್ನಸಂಗನಲ್ಲಿ ಬಸವನೆಂಬ ಪ್ರಸಾದಿಗೆ ನಾನೆಂಬ ಓಗರ.
Transliteration Sacarācaradoḷagippa lān̄chanadhārigaḷeyde sayadānave prasādavendu hesariṭṭukoṇḍumbaru, lōka mēvōcyatē liṅgaṁ liṅgamēvōcyatē śivaḥ| talliṅgadhāraṇācchiṣyaḥ [punar]janmavivarjitaḥ|| intu pakr̥tyādigaḷa guṇaṅgaḷu pallaṭavāda kāraṇa. Kūḍalacennasaṅganalli basavanemba prasādige nānemba ōgara.