ಅರ್ಪಿತದಲ್ಲಿ ಅವಧಾನವರತು,
ಅನರ್ಪಿತದಲ್ಲಿ ಸುಯಿಧಾನವರತು.
ಬಂದುದು ಬಾರದುದೆಂದರಿಯದೆ,
ನಿಂದ ನಿಲವಿನ ಪರಿಣಾಮತೆಯಾಯಿತ್ತು.
"ರುಚೀ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ|
ಆದೌ ಪ್ರವರ್ತತೇ ಯಸ್ಯ ಶಿವೇನ ಸಹ ಮೋದತೇ"||
ಎಂದುದಾಗಿ,
ಕೂಡಲಚೆನ್ನಸಂಗಯ್ಯಾ,
ನಿಮ್ಮವರು ಶಿವಸುಖಸಂಪನ್ನರಾದರಯ್ಯಾ.
Transliteration Arpitadalli avadhānavaratu,
anarpitadalli suyidhānavaratu.
Bandudu bāradudendariyade,
ninda nilavina pariṇāmateyāyittu.
Rucī rūpaṁ na ca jñānaṁ arpitānarpitaṁ tathā|
ādau pravartatē yasya śivēna saha mōdatē||
endudāgi,
kūḍalacennasaṅgayyā,
nim'mavaru śivasukhasampannarādarayyā.