ತ್ರಿವಿಧಕ್ಕೆ ರತಿಯಾಗಿ, ತ್ರಿವಿಧದ ಜನಿತವ ತಿಳಿದು,
ತ್ರಿವಿಧ ಕಣ್ದೆರೆದು, ತ್ರಿವಿಧ ತ್ರಿವಿಧವಗ್ರಹಿಸಿ,
ತ್ರಿವಿಧ ಪಥವ ಮೀರಿ ತ್ರಿವಿಧ ನಿರ್ಣಯ ನಿಷ್ಪತ್ತಿ
ಕೂಡಲಚೆನ್ನಸಂಗಾ, ನಿಮ್ಮ ಶರಣ.
Transliteration Trividhakke ratiyāgi, trividhada janitava tiḷidu,
trividha kaṇderedu, trividha trividhavagrahisi,
trividha pathava mīri trividha nirṇaya niṣpatti
kūḍalacennasaṅgā, nim'ma śaraṇa.