Up
Down
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
Select...
Transliteration
Tamil Mss Transcription
Music
Video
English Translation
Russian Translation
German Translation
Hindi Translation
Telugu Translation
Tamil Translation
Marathi Translation
Malayalam Translation
Urdu Translation
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 683 
Search
 
ಅಣುಕುಂಡಲ ನಾಗಬಂಧನವೆಂಬ ಸುಷುಮ್ನನಾಳದಿಂದ ಒದಗಿದ ನಿರೂಪ[ಬಿಂದು]ವನು ಒಸರಲೀಯದೆ ಕಟ್ಟಿಹೆನೆಂದರೆ ಆ ಶಶಿಧರಂಗಳವಲ್ಲ. ಒಡಲುಗೊಂಡರೆ ಒಸರುವುದು ಮಾಬುದೆ? ಒಡಲಿಲ್ಲದಿದ್ದರೆ ಒಸರುವುದು ಮಾಬುದು. ಒಸರಲೀಯದೆ ಕಟ್ಟಿದೆನೆಂಬ ಮೂರ್ಖರೆಲ್ಲಾ ಭಂಗಬಟ್ಟು ನಸಿದ್ಧರಾಗಿ ಹೋದರಯ್ಯಾ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ, ಕೋಟ್ಯನುಕೋಟಿ ಕರ್ಮವ ಪೂಜಿಸುವ ಕರ್ಮಿಗಳೆತ್ತ ಬಲ್ಲರು, ಆ ಶರಣನ? ಭಕ್ತಿ ಹಿಂದುಮುಂದಾದ ಮಹಾಲಿಂಗೈಕ್ಯನ ನಿಲವ? ಇದು ಕಾರಣ, ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯರ ನಿಲವ ಲಿಂಗೈಕ್ಯನೇ ಬಲ್ಲ.
Transliteration
Aṇukuṇḍala nāgabandhanavemba suṣumnanāḷadinda odagida nirūpa[bindu]vanu osaralīyade kaṭṭihenendare ā śaśidharaṅgaḷavalla. Oḍalugoṇḍare osaruvudu mābude? Oḍalilladiddare osaruvudu mābudu. Osaralīyade kaṭṭidenemba mūrkharellā bhaṅgabaṭṭu nasid'dharāgi hōdarayyā. Uṇḍu upavāsi baḷasi brahmacāri, kōṭyanukōṭi karmava pūjisuva karmigaḷetta ballaru, ā śaraṇana? Bhakti hindumundāda mahāliṅgaikyana nilava? Idu kāraṇa, kūḍalacennasaṅgayyā liṅgaikyara nilava liṅgaikyanē balla.
ಪ್ರತಿಕ್ರಿಯೆಗಳು / Comments
Name
*
:
Phone
*
:
e-Mail:
Place/State/Country
Comment
*
:
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: