•  
  •  
  •  
  •  
Index   ವಚನ - 686    Search  
 
ಆಚಾರದರಿವು ಆಗಮವ ಕೂಡಿಕೊಂಡಿಹುದು. ಗುರುವಾಚಾರದ [ಅರಿವು] ನಿಷ್ಠೆಯ ಕೂಡಿಕೊಂಡಿಹುದು. ಲಿಂಗಾಚಾರದರಿವು ಕ್ರೀಯ ಕೂಡಿಕೊಂಡಿಹುದು. ಸಮಯಾಚಾರದ ಅರಿವು ಸಂಬಂಧವ ಕೂಡಿಕೊಂಡಿಹುದು. ಇಂತೀ ಚತುರ್ವಿಧದೊಳಗಾವಂಗವೂ ಇಲ್ಲ, ಕೂಡಲಚೆನ್ನಸಂಗನ ಶರಣರ ಪರಿ ಬೇರೆ.
Transliteration Ācāradarivu āgamava kūḍikoṇḍ'̔ihudu. Guruvācārada [arivu] niṣṭheya kūḍikoṇḍ'̔ihudu. Liṅgācāradarivu krīya kūḍikoṇḍ'̔ihudu. Samayācārada arivu sambandhava kūḍikoṇḍ'̔ihudu. Intī caturvidhadoḷagāvaṅgavū illa, kūḍalacennasaṅgana śaraṇara pari bēre.