•  
  •  
  •  
  •  
Index   ವಚನ - 720    Search  
 
ಹಸಿವರತಲ್ಲದೆ ಪ್ರಸಾದಿವೇದಿಯಲ್ಲ, ತೃಷೆಯರತಲ್ಲದೆ ಪಾದೋದಕವೇದಿಯಲ್ಲ, ನಿದ್ರೆಯರತಲ್ಲದೆ ಭವವಿರಹಿತನಲ್ಲ. ಅನಲ ಪವನ [ಗುಣವರತಲ್ಲದೆ] ಜನನ ಮರಣ ರಹಿತನಲ್ಲಯ್ಯ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವೆಲ್ಲರಿಗೆಲ್ಲಿಯದು?
Transliteration Hasivaratallade prasādivēdiyalla, tr̥ṣeyaratallade pādōdakavēdiyalla, nidreyaratallade bhavavirahitanalla. Anala pavana [guṇavaratallade] janana maraṇa rahitanallayya. Idu kāraṇa, kūḍalacennasaṅgayyanalli liṅgaikyavellarigelliyadu?