•  
  •  
  •  
  •  
Index   ವಚನ - 793    Search  
 
ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಗುರುವಾಯಿತ್ತು, 'ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಶಿಷ್ಯನಾದ. 'ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಲಿಂಗವಾಯಿತ್ತು, 'ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಭಕ್ತನಾದ. 'ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಪ್ರಸಾದವಾಯಿತ್ತು, 'ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಪ್ರಸಾದಿಯಾದ. 'ಯದ್ಭಾವಂ ತದ್ಭವತಿ'ಯೆಂಬ ಭಾವವುಂಟಾಗಿ ಕೂಡಲಚೆನ್ನಸಂಗ ತಾನಾದ.
Transliteration Yadbhāvaṁ tadbhavati'yemba bhāvavuṇṭāgi guruvāyittu, 'yadbhāvaṁ tadbhavati'yemba bhāvavuṇṭāgi śiṣyanāda. 'Yadbhāvaṁ tadbhavati'yemba bhāvavuṇṭāgi liṅgavāyittu, 'yadbhāvaṁ tadbhavati'yemba bhāvavuṇṭāgi bhaktanāda. 'Yadbhāvaṁ tadbhavati'yemba bhāvavuṇṭāgi prasādavāyittu, 'yadbhāvaṁ tadbhavati'yemba bhāvavuṇṭāgi prasādiyāda. 'Yadbhāvaṁ tadbhavati'yemba bhāvavuṇṭāgi kūḍalacennasaṅga tānāda.