ಕಾಯಪ್ರಸಾದ ಒಂದೆಡೆಯಲ್ಲಿ,
ಜೀವಪ್ರಸಾದ ಒಂದೆಡೆಯಲ್ಲಿ,
ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ,
ನಿತ್ಯಪ್ರಸಾದ ಒಂದೆಡೆಯಲ್ಲಿ,
ವಚನಪ್ರಸಾದ ಒಂದೆಡೆಯಲ್ಲಿ,
ಅರ್ಥ ಪ್ರಾಣ ಅಭಿಮಾನ ಒಂದೆಡೆಯಲ್ಲಿ,
ಅಖಂಡಿತವೆನಿಸಿ ತಾ ಲಿಂಗಪ್ರಸಾದ ಒಂದೆಡೆಯಲ್ಲಿ.
ಇಂತಿವೆಲ್ಲವೂ ಏಕವಾದ ಪ್ರಸಾದಿಯ ಪ್ರಸಾದದಿಂದ
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯಾದೆನಯ್ಯಾ.
Transliteration Kāyaprasāda ondeḍeyalli,
jīvaprasāda ondeḍeyalli,
vyāpāra prasāda ondeḍeyalli,
nityaprasāda ondeḍeyalli,
vacanaprasāda ondeḍeyalli,
artha prāṇa abhimāna ondeḍeyalli,
akhaṇḍitavenisi tā liṅgaprasāda ondeḍeyalli.
Intivellavū ēkavāda prasādiya prasādadinda
kūḍalacennasaṅgā nim'ma prasādiyādenayyā.