•  
  •  
  •  
  •  
Index   ವಚನ - 875    Search  
 
ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು ಆ ಭಕ್ತಿಯಾಚಾರದ ನೆಲೆಯನರಿಯದೆ ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಂಗಳೆಂಬಿವಾದಿಯಾದ ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ ಮನೆದೈವಕ್ಕೆಂದು ನೇಮಿಸಿ ಮಾಡಿದ ಪಾಕವ ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ ಓಗರವೆಂದರ್ಪಿಸುವುದು ಅನಾಚಾರ, ಪಂಚಮಹಾಪಾತಕ. ಅವನು ಸದಾಚಾರಕ್ಕೆ ಹೊರಗು, ಅದೇನು ಕಾರಣವೆಂದೊಡೆ: ಅದು ಶೈವದೈವೋಚ್ಛಿಷ್ಟವಾದ ಕಾರಣ. ಅದರಿಂಲೂ ಭವಿಯ ಮನೆಯ ಅಶನ ಉತ್ತಮ. ಅದೆಂತೆಂದೊಡೆ: ಅದು ಅನ್ನವಾದ ಕಾರಣ. ಆ ಅನ್ನದ ಪೂರ್ವಾಶ್ರಯ ಕಳೆಯಬಹುದಾಗಿ ಆ ಉಚ್ಛಿಷ್ಟದ ಪೂರ್ವಾಶ್ರಯವ ಹೋಗದಾಗಿ. ಅದೆಂತೆಂದೊಡೆ: "ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಮ್ ಶಿವಭಕ್ತ ಕೃತಂ ಪಾಕಂ ಲಿಂಗನೈವೇದ್ಯಮುತ್ತಮಮ್" ಎಂದುದಾಗಿ ಭಕ್ತಂಗೆ ಭವಿಯ ಮನೆಯ ಅಶನ ನಾಯಡಗು ನರಮಾಂಸ ಕ್ರಿಮಿ ಮಲಕ್ಕೆ ಸಮವೆಂದರಿದು ಶಿವಭಕ್ತರಾದವರು ಮುಟ್ಟರು; ಅದಕಿಂದಲೂ ಕರಕಷ್ಟ ಕರಕಷ್ಟ ನೋಡಾ. ಅರೆಭಕ್ತರು ತಮ್ಮ ಕುಲದೈವವ ಕೂರ್ತು ಮಾಡಿದ ಆ ಭವಿ ಶೈವದೈವೋಚ್ಛಿಷ್ಟವ ತಾ ನೆರೆಭಕ್ತನಾಗಿ ಆಚಾರವನನುಸರಣೆಯ ಮಾಡಿಕೊಂಡು ಆ ಅರೆಭಕ್ತರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವದಕ್ಕಿಂತಲೂ ಹೊರಗಣ ಹೊಲೆಯರ ಮನೆಯ ಅನ್ನವೇ ಮಿಗೆ ಮಿಗೆ ಉತ್ತಮ ಕಾಣಾ ಕೂಡಲಚೆನ್ನಸಂಗಯ್ಯಾ.
Transliteration Aṅgada mēle liṅgayuktavāda bhaktanu ā bhaktiyācārada neleyanariyade sambandhakkan'yavāda nandi vīrabhadra matte liṅgaṅgaḷembivādiyāda bhaviśaivadaivaṅgaḷa hesarinalli mīsaluviḍidu bāsaṇisi manedaivakkendu nēmisi māḍida pākava tanna karasthalada nija vīraśaivaliṅgakke ōgaravendarpisuvudu anācāra, pan̄camahāpātaka. Avanu sadācārakke horagu, adēnu kāraṇavendoḍe: Adu śaivadaivōcchiṣṭavāda kāraṇa. Adarinlū bhaviya maneya aśana uttama. Adentendoḍe: Adu annavāda kāraṇa. Ā annada pūrvāśraya kaḷeyabahudāgi ā ucchiṣṭada pūrvāśrayava hōgadāgi. Adentendoḍe: Bhavihastakr̥taṁ pākaṁ liṅganaivēdya kilbiṣam śivabhakta kr̥taṁ pākaṁ liṅganaivēdyamuttamam endudāgi Bhaktaṅge bhaviya maneya aśana nāyaḍagu naramānsa krimi malakke samavendaridu śivabhaktarādavaru muṭṭaru; adakindalū karakaṣṭa karakaṣṭa nōḍā. Arebhaktaru tam'ma kuladaivava kūrtu māḍida ā bhavi śaivadaivōcchiṣṭava tā nerebhaktanāgi ācāravananusaraṇeya māḍikoṇḍu ā arebhaktara maneyalli hokku liṅgārcaneya māḍuvadakkintalū horagaṇa holeyara maneya annavē mige mige uttama kāṇā kūḍalacennasaṅgayyā.