•  
  •  
  •  
  •  
Index   ವಚನ - 877    Search  
 
ಅಂಗದ ಮೇಲೆ ಲಿಂಗವಿಲ್ಲದನ್ನಕ್ಕರ, ಪ್ರಾಣದಲ್ಲಿ ಲಿಂಗಪರಿಣಾಮವನೆಯ್ದುವ ಪರಿಯೆಂತಯ್ಯಾ? ಅಂಗತ್ರಯವುಳ್ಳವರು ಲಿಂಗತ್ರಯಸಂಪನ್ನರಾಗಬೇಕು, ಒಂದಂಗ ವಿರಹಿತರಾಗಿಪ್ಪವರುಂಟೆ? ಕಂಗಳ ನೋಟಕ್ಕೆ ಇಂಬಾವುದು ಹೇಳಾ ಒಂದಂಗ ಬಿಟ್ಟು ಒಂದಂಗ ತೋರದಾಗಿ. ಸಂದುಭೇದವಿಲ್ಲದಿಪ್ಪ ಮಡಿವಾಳನ ನಿಲವು ಕೂಡಲಚೆನ್ನಸಂಗಯ್ಯನಲ್ಲಿ ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮ.
Transliteration Aṅgada mēle liṅgavilladannakkara, prāṇadalli liṅgapariṇāmavaneyduva pariyentayyā? Aṅgatrayavuḷḷavaru liṅgatrayasampannarāgabēku, ondaṅga virahitarāgippavaruṇṭe? Kaṅgaḷa nōṭakke imbāvudu hēḷā ondaṅga biṭṭu ondaṅga tōradāgi. Sandubhēdavilladippa maḍivāḷana nilavu kūḍalacennasaṅgayyanalli ninagentu sādhyavāyittu hēḷā sid'dharāma.