•  
  •  
  •  
  •  
Index   ವಚನ - 880    Search  
 
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ಭಕ್ತಾಂಗನೆಯರು ತಮ್ಮ ಲಿಂಗಶರೀರಂಗಳ ಮಧ್ಯದಲ್ಲಿ ಹರಭಕ್ತಿಗೆ ಹೊರಗಾದ ಅಸು[ರಾಂಶಿ] ಕವಪ್ಪ ಹಸುರು ಹಚ್ಚೆಗಳೆಂಬ ಪತಿತ ಲೇಖನ ಇವಾದಿಯಾದ ಅನ್ಯ ಚಿಹ್ನೆಗಳನು ಅಂಕಿತಧಾರಣ ಲೇಖನಂಗಳ ಮಾಡಿಕೊಂಡು ಮತ್ತೆ ತಾವು ಲಿಂಗವನರ್ಚಿಸಿ ಭಕ್ತರಾದೆವೆಂಬ ಈ ಭಂಗಮಾರಿ ಹೊಲೆಜಂಗುಳಿಗಳಿಗೆ ಉಪದೇಶವ ಕೊಟ್ಟ ಗುರು, ಪ್ರಸಾದ ನೀಡುವ ಜಂಗಮ, ಅವರಗೊಡಗೂಡಿಕೊಂಡು ನಡೆವ ಭಕ್ತತತಿ ಈ ಚತುರ್ವಿಧರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರ ವೇಳೆ ಬಂದು ನರಕವಿಪ್ಪತ್ತೆಂಟುಕೋಟಿಯನೈದುವರು, ಅದೆಂತೆಂದೊಡೆ: "ಭಕ್ತನಾರೀ ಸ್ವಯಾಂಗೇಷು ಸ್ವಸ್ತಿಕಾದೀನ್ ಚಿಹ್ನೆಯೇತ್ ಲೇಖನಾಂಕಂ ಯದಿ ಕೃತ್ವಾ ತೇsಪಿ ಸ್ತ್ರೀ ಪತಿತ ಸ್ತ್ರೀಣಾಂ ತಸ್ಯೋಪದೇಶಶೇಷಂ ಚ ದತ್ವಾಶ್ಚೈ ಗುರುಃ ಚರಾನ್ ತಪತ್ಸಂಗ ಸಯೋದ್ಭಕ್ತಾ ತದಾದಿ ಚತುರಾನ್ವಯಂ ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ಅಷ್ಟವಿಂಶತಿಕೋಟ್ಯಸ್ತು ನರಕಂ ಯಾತಿ ಸ ಧ್ರುವಂ" ಇಂತೆಂದುದಾಗಿ ಇದು ಕಾರಣ, ಇಂತಪ್ಪ ಅನಾಚಾರಿಗಳನು ಕೂಡಲಚೆನ್ನಸಂಗಯ್ಯ ಅಘೋರ ನರಕದಲ್ಲಿಕ್ಕುವ.
Transliteration Aṅgada mēle liṅgasāhityavanuḷḷa bhaktāṅganeyaru tam'ma liṅgaśarīraṅgaḷa madhyadalli harabhaktige horagāda asu[rānśi] kavappa hasuru haccegaḷemba patita lēkhana ivādiyāda an'ya cihnegaḷanu aṅkitadhāraṇa lēkhanaṅgaḷa māḍikoṇḍu matte tāvu liṅgavanarcisi bhaktarādevemba ī bhaṅgamāri holejaṅguḷigaḷige upadēśava koṭṭa guru, prasāda nīḍuva jaṅgama, avaragoḍagūḍikoṇḍu naḍeva bhaktatati ī caturvidharu śvapacagr̥hada śvānayōnigaḷalli Śatasahasra vēḷe bandu narakavippatteṇṭukōṭiyanaiduvaru, adentendoḍe: Bhaktanārī svayāṅgēṣu svastikādīn cihneyēt lēkhanāṅkaṁ yadi kr̥tvā tēspi strī patita strīṇāṁ tasyōpadēśaśēṣaṁ ca datvāścai guruḥ carān tapatsaṅga sayōdbhaktā tadādi caturānvayaṁ śvānayōniśataṁ gatvā cāṇḍālagr̥hamācarēt aṣṭavinśatikōṭyastu narakaṁ yāti sa dhruvaṁ intendudāgi idu kāraṇa, intappa anācārigaḷanu kūḍalacennasaṅgayya aghōra narakadallikkuva.