ಅಂಗವು ಲಿಂಗದಲ್ಲಿ ಸಂಬಂಧವಾದವರ
ಲಿಂಗವೆಂದೇ ಕಾಂಬುದು,
'ಕೀಟೋsಪಿ ಭ್ರಮರಾಯತೇ' ಎಂಬ ನ್ಯಾಯದಂತೆ,
ಅಂಗವು ಲಿಂಗ ಸೋಂಕಿ ಲಿಂಗವಾಯಿತ್ತಾಗಿ.
ಲಿಂಗವೆಂದೇ ಕಾಂಬುದು. ಅಂಗೇಂದ್ರಿಯಂಗಳೆಂಬುವಿಲ್ಲ,
ಅವೆಲ್ಲವೂ ಲಿಂಗೇಂದ್ರಿಯಂಗಳಾದ ಕಾರಣ,
ಲಿಂಗವೆಂದೇ ಕಾಂಬುದು.
"ಸರ್ಪದಷ್ಟಸ್ಯ ಯದ್ದೇಹಂ ತದ್ದೇಹಂ ವಿಷದೇಹವತ್ |
ಲಿಂಗದಷ್ಟಸ್ಯ ಯದ್ದೇಹಂ ತದ್ದೇಹಂ ಲಿಂಗದೇಹವತ್ "||
ಎಂದುದಾಗಿ
ಸರ್ವಾಂಗಲಿಂಗಿ ಕೂಡಲಚೆನ್ನಸಂಗಾ ನಿಮ್ಮ ಶರಣ.
Transliteration Aṅgavu liṅgadalli sambandhavādavara
liṅgavendē kāmbudu,
'kīṭōspi bhramarāyatē' emba n'yāyadante,
aṅgavu liṅga sōṅki liṅgavāyittāgi.
Liṅgavendē kāmbudu. Aṅgēndriyaṅgaḷembuvilla,
avellavū liṅgēndriyaṅgaḷāda kāraṇa,
liṅgavendē kāmbudu.
Sarpadaṣṭasya yaddēhaṁ taddēhaṁ viṣadēhavat |
liṅgadaṣṭasya yaddēhaṁ taddēhaṁ liṅgadēhavat||
endudāgi
sarvāṅgaliṅgi kūḍalacennasaṅgā nim'ma śaraṇa.