•  
  •  
  •  
  •  
Index   ವಚನ - 917    Search  
 
ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯ ಪ್ರಸಾದಿಗಳ ವಿವರ: ಗುರು ಮೊದಲು ʼಆಚರಿಸುವಂತಹ ಮರ್ಮವನು ತಿಳಿದು ಶಿವಸಂಸ್ಕಾರವನು ಹೊಂದಿ ನಡೆ' ಎಂದು, ಅತಿ ಮೋಹನದಿಂದ ಸಮಸ್ತ ಮರ್ಮವನು ತಿಳುಹಿ ಹಿಡಿದ ವ್ರತಾಚರಣೆಗೆ ಸಂದು ಇಲ್ಲದ ಹಾಗೆ ಅಪಮೃತ್ಯು ಬಂದು ಸೋಂಕದ ಹಾಗೆ ಪ್ರಮಥಕೃಪಾಕಟಾಕ್ಷದಿಂದ ನಡೆದು ಹೋಗುವರು; ಅವರೆ ಅಚ್ಚಪ್ರಸಾದಿಗಳು, ಮರ್ತ್ಯಲೋಕದ ಮಹಾಗಣಂಗಳೆನಿಸುವರು. ಮಿಕ್ಕಿನ ನಿಚ್ಚಪ್ರಸಾದಿಗಳು ಸಮಯ ಪ್ರಸಾದಿಗಳು- ಅವರು ನಡೆದ ಮೇಲು ಪಂಕ್ತಿ ಆಚರಣೆಯ ನೋಡಿ, ಅವರಂತಹ ಸುವಿವೇಕ ನಮಗೆ ಬಾರದೆಂಬುದ ತಿಳಿದು, ಅವರೆ ತಮ್ಮ ಇಷ್ಟಲಿಂಗವಾಗಿ, ತಾವೆ ಅವರ ಭೃತ್ಯರಾಗಿ ನಡೆಯುತ್ತ ಏಕಾರ್ಥ ಪರಮಾರ್ಥಕ್ಕೆ ಸಮಾನವಾಗಿ ಆಚರಿಸಬೇಕೆಂಬ ಅನುಸರಣೆ ಅವರಲ್ಲಿ ಹುಟ್ಟಿದ ನಿಮಿತ್ತ, ಅದೇ ಜಂಗಮ ಬಂದು ನಿಚ್ಚಪ್ರಸಾದಿಗಳಿಗೆ ಎರಡರಲ್ಲಿ ಅಶಕ್ತರೆಂದು ತಿಳಿದು ಅತಿ ಸೂಕ್ಷ್ಮವಾಗಿ ಅವರಿಬ್ಬರ ಆಚರಣೆಯ ಅವರಿಬ್ಬರಲ್ಲಿ ಹರಿಸಿ, ಆಯಾಯ ತತ್ಕಾಲಕ್ಕೆ ಜಂಗಮ ದೊರೆದಂತಹದೆ ಆಚರಣೆ, ಜಂಗಮ ದೊರೆಯದಂತಹದೆ ಸಂಬಂಧ ಎಂದು ಅರುಹಿಕೊಟ್ಟಲ್ಲಿ, ದೊರೆದಾಗಲಿಂತು ಆಚಾರ ಒಡಂಬಡಿಕೆ, ದೊರೆಯದಾಗ ಆಚಾರ ಒಡಂಬಡಿಕೆಯಾಗದು- ಎಂದು ಮರ್ಮವ ತಿಳಿದು, ಜಂಗಮವು ಇಲ್ಲದ ವೇಳೆಗೆ ಅತಿಸೂಕ್ಷ್ಮವಾಗಿ ಅತಿವಿಶಾಲದಿಂದ ನಿರೂಪಿಸುತಿರ್ದರು. ಆ ಗುರು ಮೊದಲಲ್ಲಿ ಲಿಂಗವ ಕರುಣಿಸಿ ಕೊಟ್ಟಂತಹುದೆ ನಿಮ್ಮ ಕಳೆ, ನಾ ನಿಮ್ಮ ಚಿತ್ತು; ಎರಡರ ಸಮರಸವೆ ನಿಮ್ಮ ಬಿಂದು, ಆ ಬಿಂದುವೆ `ಅ'ಕಾರ ಪ್ರಣವ, ನಿಮ್ಮ ಇಷ್ಟಲಿಂಗದ ಶಕ್ತಿಪೀಠದಲ್ಲಿ ಗುರುವಾಗಿ, ಆ ಕಳೆಯೆ `ಮ'ಕಾರ ಪ್ರಣವ. ನಿಮ್ಮ ಲಿಂಗದ ಗೋಮುಖದಲ್ಲಿ ಜಂಗಮವಾಗಿ, ಆ ಎರಡರ ಕೂಟವೆ ನಾದ; ಅದೆ `ಉ'ಕಾರ ಪ್ರಣವ. ನಿಮ್ಮ ಲಿಂಗದ ಗೋಳಕದಲ್ಲಿ ಲಿಂಗವಾಗಿ, ಆ ಲಿಂಗವೆ ನಿಮ್ಮ ರಮಣನೆಂದು ಭಾವಿಸಿದ ನಿಮಿತ್ತ ನೀವೆ ಲಿಂಗವಾದ ಕಾರಣ ಆ ಲಿಂಗವೆ ನಿಮ್ಮ ಅಂಗವಾಗಿ, ಆ ಜಂಗಮವೆ ನಿಮ್ಮ ಪ್ರಾಣವಾಗಿ, ಗುರುವೆ ನಿಮ್ಮ ಆಚರಣೆಯಾಗಿರ್ದ ನಿಮಿತ್ತ, ಅದೇ ಗುರುವೆ ನಿಮ್ಮ ವಾಙ್ಮನದಲ್ಲಿ, ಅದೇ ಲಿಂಗವೆ ನಿಮ್ಮ ಕರಕಮಲದಲ್ಲಿ ಅದೇ ಜಂಗಮವೆ ನಿಮ್ಮ ವಿಗ್ರಹದಲ್ಲಿ, ನೆಲೆಗೊಂಡಿರ್ಪುದೆಂದು ಸಂಬಂಧಿಸಿಕೊಟ್ಟಲ್ಲಿ ಆ ಗುರು ಹೇಳಿದಂತಹ ಪತಿವ್ರತಾಧರ್ಮ ತಿಳಿಯದೆ ಆಚರಿಸಿದ ಕಾರಣ ಆಯಾಯ ತತ್ಕಾಲದಲ್ಲಿ ಬಂದೊದಗುವವು, ಅದೇ ಸಮರಸಾಚರಣೆಯ ಉಪಚಾರವು. ನೀವು ಯಾವಸ್ಥಲವಿಡಿದು ಆಚರಿಸಿದಡೆಯೂ, ಆಯಾಯ ಸ್ಥಲಂಗಳಲ್ಲಿ ಆರು ಸ್ಥಲಂಗಳು ಬಂದು ಸಂಬಂಧವಾಗುವುವು. ಮಿಕ್ಕಿನ ಉಪದೇಶವಿಲ್ಲದೆ ಶುದ್ಧಶೈವರಿಗೆ ಗುರು, ಅಷ್ಟಷ್ಟು ಜಪ-ಶಿವಾರ್ಚನೆಯ ಹೇಳಿ `ಹೀಗೆ ಆಚರಿಸು' ಎಂದರುಹಿಕೊಟ್ಟಲ್ಲಿ, ಅವರಿಗೆ ಒಂದೆ ಸ್ಥಲ ಸಂಬಂಧವು. ಅವರಿಗೆ ಮತ್ತೊಂದು ಸ್ಥಲದ ಮರ್ಮವ ಗುರು ಅರುಹಿ ಕೊಡಲಿಲ್ಲ. ಏನು ಕಾರಣವೆಂದಡೆ ಅವರು ಅಶಕ್ತರಾದ ನಿಮಿತ್ತ. ಅವರು ಖಂಡಿತಾಚರಣೆಯುಳ್ಳವರು. ಅವರಿಗೆ ಸಮರಸಾಚರಣೆ ಹೊಂದದ ನಿಮಿತ್ತ ಅವರು ಮೂರು ಜನ್ಮಕ್ಕೆ ಮುಕ್ತರು. ಅದರಲ್ಲಿ ತಪ್ಪಿ ನಡೆದಡೆ ನೂರು ಜನ್ಮಕ್ಕೆ ಮುಕ್ತರು. ಹಾಗಾದಡೆಯೂ ಖಂಡಿತಮುಕ್ತರಲ್ಲದೆ ನಿಜಮುಕ್ತರಲ್ಲ. ಇದನರಿತು ಶ್ರಿಗುರುನಾಥನು ಅವರಿಗೆ ತಕ್ಕಂತಹ ನಡತೆಯ ಅರುಹಿಕೊಡುವನಲ್ಲದೆ ಹೆಚ್ಚಾಗಿ ಅರುಹಿಕೊಡನು, ಕೂಡಲಚೆನ್ನಸಂಗಮದೇವಾ.
Transliteration Accaprasādi, niccaprasādi, samaya prasādigaḷa vivara: Guru modalu ʼācarisuvantaha marmavanu tiḷidu śivasanskāravanu hondi naḍe' endu, ati mōhanadinda samasta marmavanu tiḷuhi hiḍida vratācaraṇege sandu illada hāge apamr̥tyu bandu sōṅkada hāge pramathakr̥pākaṭākṣadinda naḍedu hōguvaru; avare accaprasādigaḷu, martyalōkada mahāgaṇaṅgaḷenisuvaru. Mikkina niccaprasādigaḷu samaya prasādigaḷu- avaru naḍeda mēlu paṅkti ācaraṇeya nōḍi, Avarantaha suvivēka namage bāradembuda tiḷidu, avare tam'ma iṣṭaliṅgavāgi, tāve avara bhr̥tyarāgi naḍeyutta ēkārtha paramārthakke samānavāgi ācarisabēkemba anusaraṇe avaralli huṭṭida nimitta, adē jaṅgama bandu niccaprasādigaḷige eraḍaralli aśaktarendu tiḷidu ati sūkṣmavāgi avaribbara ācaraṇeya avaribbaralli harisi, āyāya tatkālakke jaṅgama doredantahade ācaraṇe, jaṅgama doreyadantahade sambandha endu aruhikoṭṭalli, doredāgalintu ācāra oḍambaḍike, Doreyadāga ācāra oḍambaḍikeyāgadu- endu marmava tiḷidu, jaṅgamavu illada vēḷege atisūkṣmavāgi ativiśāladinda nirūpisutirdaru. Ā guru modalalli liṅgava karuṇisi koṭṭantahude nim'ma kaḷe, nā nim'ma cittu; eraḍara samarasave nim'ma bindu, ā binduve `a'kāra praṇava, nim'ma iṣṭaliṅgada śaktipīṭhadalli guruvāgi, ā kaḷeye `ma'kāra praṇava. Nim'ma liṅgada gōmukhadalli jaṅgamavāgi, ā eraḍara kūṭave nāda; ade `u'kāra praṇava. Nim'ma liṅgada gōḷakadalli liṅgavāgi, ā liṅgave nim'ma ramaṇanendu bhāvisida nimitta nīve liṅgavāda kāraṇa ā liṅgave nim'ma aṅgavāgi, ā jaṅgamave nim'ma prāṇavāgi, guruve nim'ma ācaraṇeyāgirda nimitta, adē guruve nim'ma vāṅmanadalli, adē liṅgave nim'ma karakamaladalli adē jaṅgamave nim'ma vigrahadalli, nelegoṇḍirpudendu sambandhisikoṭṭalli Ā guru hēḷidantaha pativratādharma tiḷiyade ācarisida kāraṇa āyāya tatkāladalli bandodaguvavu, adē samarasācaraṇeya upacāravu. Nīvu yāvasthalaviḍidu ācarisidaḍeyū, āyāya sthalaṅgaḷalli āru sthalaṅgaḷu bandu sambandhavāguvuvu. Mikkina upadēśavillade śud'dhaśaivarige guru, aṣṭaṣṭu japa-śivārcaneya hēḷi `hīge ācarisu' endaruhikoṭṭalli, avarige onde sthala sambandhavu. Avarige mattondu sthalada marmava guru aruhi koḍalilla. Ēnu kāraṇavendaḍe avaru aśaktarāda nimitta. Avaru khaṇḍitācaraṇeyuḷḷavaru. Avarige samarasācaraṇe hondada nimitta avaru mūru janmakke muktaru. Adaralli tappi naḍedaḍe nūru janmakke muktaru. Hāgādaḍeyū khaṇḍitamuktarallade nijamuktaralla. Idanaritu śrigurunāthanu avarige takkantaha naḍateya aruhikoḍuvanallade heccāgi aruhikoḍanu, kūḍalacennasaṅgamadēvā.