•  
  •  
  •  
  •  
Index   ವಚನ - 920    Search  
 
ಅಜ್ಞಾನ ವಶೀಕೃತರಾದವರು ಷಡುದರುಶನಂಗಳಲ್ಲಿ ಹೊಕ್ಕು ಪರದೈವಂಗಳ ಲಾಂಛನ ಮುದ್ರೆಯಪ್ಪ ಶಂಖ ಚಕ್ರ ಅಂಕುಶ ಪಾಶ ಗದಾದಿಯಾದವರಿಂದ ಶ್ರೇಷ್ಠೋಪದೇಶವೆಂದು ಕರ ಬಾಹು ಭುಜ ಉರ ಲಲಾಟ ಮೊದಲಾದ ಅವಯವಂಗಳಲ್ಲಿ ರಚಿಸಲ್ಪಟ್ಟವರಾಗಿ ದಹನಾಂಕ ಲೇಖನವಾದವರು ಷಡುದರ್ಶನ ಬ್ರಾಹ್ಮಣರಲ್ಲ. ಅದಂತೆಂದಡೆ, ಯಮಸ್ಮತಿಯಲ್ಲಿ: "ನಾಂಕಯೇತ್ತಸ್ಯ ದೇಹೇಷು ದೇವತಾಯುಧಲಾಂಛನಂ ದಹನಾಲ್ಲೇಖನಾದ್ವಿಪ್ರಃ ಪಾತ್ಯಯಂತಿ ಲಕ್ಷಣಾತ್" ಎಂದುದಾಗಿ ಯಜ್ಞವೈಭವ ಕಾಂಡದಲ್ಲಿ: "ಕೇನ ಚಿಹ್ನಾಂಕಿತೋ ಮರ್ತ್ಯೋ ನ ಸಾಕ್ಷೀ ಸರ್ವತೋ ಭವೇತ್! ಶ್ರೌತಾರ್ಥೇಷು ಸದಾಚಾರೇ ನಾಧಿಕಾರೀ ಚಲಾಂಕಿತಃ" ಎಂದುದಾಗಿ ಇಂತಪ್ಪ ಪಾಷಂಡಿ ಪತಿತ ನರಕ ಜೀವಿಗಳಿಗೆ ಶಾಸ್ತ್ರಾರ್ಥಾದಿಯಾದ ಸದಾಚಾರಂಗಳಲ್ಲಿ ದೈವಕರ್ಮಂಗಳಲ್ಲಿ ಅಧಿಕಾರತ್ವವಿಲ್ಲವಾಗಿ ನರಕವನೈದುವರು ಕಾಣಾ ಕೂಡಲಚೆನ್ನಸಂಗಮದೇವಾ.
Transliteration Ajñāna vaśīkr̥tarādavaru ṣaḍudaruśanaṅgaḷalli hokku paradaivaṅgaḷa lān̄chana mudreyappa śaṅkha cakra aṅkuśa pāśa gadādiyādavarinda śrēṣṭhōpadēśavendu kara bāhu bhuja ura lalāṭa modalāda avayavaṅgaḷalli racisalpaṭṭavarāgi dahanāṅka lēkhanavādavaru ṣaḍudarśana brāhmaṇaralla. Adantendaḍe, yamasmatiyalli: Nāṅkayēttasya dēhēṣu dēvatāyudhalān̄chanaṁ dahanāllēkhanādvipraḥ pātyayanti lakṣaṇāt endudāgi yajñavaibhava kāṇḍadalli: Kēna cihnāṅkitō martyō na sākṣī sarvatō bhavēt! Śrautārthēṣu sadācārē nādhikārī calāṅkitaḥ endudāgi intappa pāṣaṇḍi patita naraka jīvigaḷige śāstrārthādiyāda sadācāraṅgaḷalli daivakarmaṅgaḷalli adhikāratvavillavāgi narakavanaiduvaru kāṇā kūḍalacennasaṅgamadēvā.