•  
  •  
  •  
  •  
Index   ವಚನ - 923    Search  
 
ಅಡಿಪಾದದಿಂದ ಮೂರು ವೇಳೆ ಸ್ಪರ್ಶನವ ಮಾಡಿಕೊಳ್ಳುವುದು ಧೂಳಪಾದೋದಕ, ಅದೇ ದೀಕ್ಷಾಪಾದೋದಕವೆನಿಸುವುದು. ಅದರಿಂದ ಸ್ನಾನ ಮುಖಪ್ರಕ್ಷಾಲನ ಅಭಿಷೇಕವ ಮಾಡಿಕೊಂಬುದು. "ಜಂಗಮಾನಾಂ ಚ ಪಾದೋದಂ ಪಾನೀಯಂ ಚ ಕದಾಚನ ಸ್ನಾತವ್ಯಂ ಮೂರ್ಧ್ನಿ ಧರ್ತವ್ಯಂ ಪ್ರೋಕ್ಷಿತವ್ಯಂ ಸ್ವದೇಹಕೇ'' ಎಂದುದಾಗಿ, ಈ ರೀತಿಯಲ್ಲಿ ನಡೆಯಬಲ್ಲಡೆ ಆತನೆ ಅಚ್ಚಶರಣನೆಂಬೆ ಕೂಡಲಚೆನ್ನಸಂಗಮದೇವಾ.
Transliteration Aḍipādadinda mūru vēḷe sparśanava māḍikoḷḷuvudu dhūḷapādōdaka, adē dīkṣāpādōdakavenisuvudu. Adarinda snāna mukhaprakṣālana abhiṣēkava māḍikombudu. Jaṅgamānāṁ ca pādōdaṁ pānīyaṁ ca kadācana snātavyaṁ mūrdhni dhartavyaṁ prōkṣitavyaṁ svadēhakē'' endudāgi, ī rītiyalli naḍeyaballaḍe ātane accaśaraṇanembe kūḍalacennasaṅgamadēvā.