•  
  •  
  •  
  •  
Index   ವಚನ - 932    Search  
 
ಅನ್ಯದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರದ ಕೂಳು, ನಂಬಿಗೆಯಿಲ್ಲದ ಭಕ್ತನ ಮನೆಯ ಆರೋಗಣೆ ಸಂದೇಹದ ಕೂಳು, ಮಾಡಿ, ಹಮ್ಮನುಡಿವ ಭಕ್ತನ ಮನೆಯ ಆರೋಗಣೆ ಕಾರಿದ ಕೂಳು, ನಿಮ್ಮ ನಂಬಿದ ಸಜ್ಜನ ಭಕ್ತನ ಮನೆಯ ಆರೋಗಣೆ ಸದಾಚಾರ ಭೃತ್ಯಾಚಾರ ಶಿವಾಚಾರದಿಂದ ಬಂದುದಾಗಿ, ಲಿಂಗಾರ್ಪಿತವಾಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ.
Transliteration An'yadaivavuḷḷa bhaktana maneya ārōgaṇe an'yāhārada kūḷu, nambigeyillada bhaktana maneya ārōgaṇe sandēhada kūḷu, māḍi, ham'manuḍiva bhaktana maneya ārōgaṇe kārida kūḷu, nim'ma nambida sajjana bhaktana maneya ārōgaṇe sadācāra bhr̥tyācāra śivācāradinda bandudāgi, liṅgārpitavāyittayyā kūḍalacennasaṅgamadēvā.