•  
  •  
  •  
  •  
Index   ವಚನ - 937    Search  
 
ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ. ಆ ಲಿಂಗ ನಿನಗೆ ಸೇರಿತ್ತಾಗಿ, ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನೀನು. ಭಕ್ತಿದಳದುಳದಿಂದ ಚೆನ್ನಸಂಗಮನಾಥನೆಂಬ ಲಿಂಗವನವಗ್ರಹಿಸಿಕೊಂಡೆನಾಗಿ ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನಾನು. ಇಂತಿಬ್ಬರಿಗೆಯೂ ಒಂದೆ ಕುಲಸ್ಥಲವಾದ ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಮಹಾಮನೆಯ ಪ್ರಸಾದ ಇಬ್ಬರಿಗೆಯೂ ಒಂದೆ ಕಾಣಾ ಪ್ರಭುವೆ.
Transliteration Animiṣaṅge liṅgava koṭṭāta basavaṇṇa. Ā liṅga ninage sērittāgi, basavaṇṇana sampradāyada kandanu nōḍā nīnu. Bhaktidaḷaduḷadinda cennasaṅgamanāthanemba liṅgavanavagrahisikoṇḍenāgi basavaṇṇana sampradāyada kandanu nōḍā nānu. Intibbarigeyū onde kulasthalavāda kāraṇa, kūḍalacennasaṅgayyanalli mahāmaneya prasāda ibbarigeyū onde kāṇā prabhuve.