•  
  •  
  •  
  •  
Index   ವಚನ - 941    Search  
 
ಅಮಲರಪ್ಪವರಾರೆಂದಡೆ: ಅನಾದಿಮಲ ಸಂಸಾರವೆಂದರಿದು ನಿರ್ಮೋಹಿಗಳಾದವರು. ಅಕಾಯಚರಿತ್ರರಾರೆಂದಡೆ: ಸದ್ಗುರುಪಥದಲ್ಲಿ ನಿಂದು, ಆನೆಂಬ ತನುಗುಣವಳಿದವರು. ಆದಿ-ಅನಾದಿಗಳೆಂಬೆರಡಳಿದವರಾರೆಂದಡೆ: ಶಾಂತಿಸ್ಥಲದಲ್ಲಿ ನಿಂದು ಪರಮಸುಖಿಗಳಾಗಿಪ್ಪವರು. ದ್ವೈತಾದ್ವೈತವನತಿಗಳೆದವರಾರೆಂದಡೆ: ತೋರುವ ತೋರಿಕೆ ನಿರ್ಮಲಸ್ವರೂಪರಾದವರು. ಅವರು ತಾವೆ ನಿಮಗರ್ಪಿತ, ನಿಮ್ಮಾಣೆ, ಕೂಡಲಚೆನ್ನಸಂಗಮದೇವಾ.
Transliteration Amalarappavarārendaḍe: Anādimala sansāravendaridu nirmōhigaḷādavaru. Akāyacaritrarārendaḍe: Sadgurupathadalli nindu, ānemba tanuguṇavaḷidavaru. Ādi-anādigaḷemberaḍaḷidavarārendaḍe: Śāntisthaladalli nindu paramasukhigaḷāgippavaru. Dvaitādvaitavanatigaḷedavarārendaḍe: Tōruva tōrike nirmalasvarūparādavaru. Avaru tāve nimagarpita, nim'māṇe, kūḍalacennasaṅgamadēvā.