•  
  •  
  •  
  •  
Index   ವಚನ - 965    Search  
 
ಅಯ್ಯಾ, ಸಾಧಕ ಸಿದ್ಧ ಅವತಾರಿಕರೆಂಬ ಗುರುಗಳು ಲೋಕದ ಮಾನವರನುದ್ಧರಿಸುವ ಪರಿ ಎಂತೆಂದಡೆ: ತಾನು ಪರಿಪೂರ್ಣತತ್ವವನರಿವ ಸಾಧನದಲ್ಲಿಹನಾಗಿ ಭವಿಯ ಭವಿತ್ವವ ಕಳೆದು ಭಕ್ತನ ಮಾಡುವ ಸಾಮರ್ಥ್ಯವು ಆ ಸಾಧಕ ಗುರುವಿನಿಂದ ಸಾಧ್ಯವಾಗದು ನೋಡಾ. ಷಟ್‍ಸ್ಥಲಜ್ಞಾನದಲ್ಲಿ ಸಿದ್ಧನಾದ ಸದ್ಗುರು ತಾನು ನಿತ್ಯನಿರ್ಮಲನಾದಡೆಯೂ ವೀರಶೈವ ಕ್ರಮಾಚರಣೆಯನಾಚರಿಸುತ್ತ, ತನ್ನ ಶಿವಭಕ್ತಿಯ ಶಕ್ತಿಯನ್ನು ಬಿತ್ತರಿಸಲು ಆಕಸ್ಮಾತ್ ತನ್ನ ದಿವ್ಯದೃಷ್ಟಿಯಿಂದ ಪರೀಕ್ಷಿಸಿ ಭವಿಯ ಭವಿತ್ವವ ಕಳೆದು ಭಕ್ತನ ಮಾಡುತ್ತಿಹನು ನೋಡಾ. ಶಿವನು ಮತ್ತು ಶಿವನಾಣತಿಯಂ ಪಡೆದ ಪ್ರಮಥರು ಗುರುರೂಪದಿಂದ ಧರೆಗವತರಿಸಿ ಬಂದು, ಭವಿ-ಭಕ್ತರೆಂಬ ಭೇದವನೆಣಿಸದೆ ಕ್ರಮಾಚಾರಮಂ ಮೀರಿದ ದಿವ್ಯಲೀಲೆಯಿಂದ ತಮ್ಮಡಿಗೆರಗಿದ ನರರೆಲ್ಲರ ಭಕ್ತರ ಮಾಡುತ್ತಿಹರು ನೋಡಾ. ಇದು ಕಾರಣ, ಕೂಡಲಚೆನ್ನಸಂಗಮದೇವನ ಶರಣರು ಈ ಕ್ರಮವನರಿದು ಗುರುಸೇವೆಗೈದರು.
Transliteration Ayyā, sādhaka sid'dha avatārikaremba gurugaḷu lōkada mānavaranud'dharisuva pari entendaḍe: Tānu paripūrṇatatvavanariva sādhanadallihanāgi bhaviya bhavitvava kaḷedu bhaktana māḍuva sāmarthyavu ā sādhaka guruvininda sādhyavāgadu nōḍā. Ṣaṭsthalajñānadalli sid'dhanāda sadguru tānu nityanirmalanādaḍeyū vīraśaiva kramācaraṇeyanācarisutta, tanna śivabhaktiya śaktiyannu bittarisalu ākasmāt tanna divyadr̥ṣṭiyinda parīkṣisi Bhaviya bhavitvava kaḷedu bhaktana māḍuttihanu nōḍā. Śivanu mattu śivanāṇatiyaṁ paḍeda pramatharu gururūpadinda dharegavatarisi bandu, bhavi-bhaktaremba bhēdavaneṇisade kramācāramaṁ mīrida divyalīleyinda tam'maḍigeragida nararellara bhaktara māḍuttiharu nōḍā. Idu kāraṇa, kūḍalacennasaṅgamadēvana śaraṇaru ī kramavanaridu gurusēvegaidaru.