•  
  •  
  •  
  •  
Index   ವಚನ - 973    Search  
 
ಅರೆಭಕ್ತರಾದವರ ನೆರೆಮನೆಯಲ್ಲಿರಲಾಗದು. ಲಿಂಗನಿಷ್ಠೆಯಿಲ್ಲದವರ ಅಂಗಳವ ಮೆಟ್ಟಲಾಗದು. ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು ಪ್ರಸಾದ ಪ್ರಸನ್ನಿಕೆಯಿಲ್ಲದವರ ಸಹಪಂಕ್ತಿಯಲ್ಲಿ ಕುಳ್ಳಿರಲಾಗದು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ನೀವು ಸಾಕ್ಷಿಯಾಗಿ ಚತುರ್ವಿಧ ಸನ್ನಹಿತರಲ್ಲದವರ ಮೆಚ್ಚರು ನಿಮ್ಮ ಶರಣರು.
Transliteration Arebhaktarādavara neremaneyalliralāgadu. Liṅganiṣṭheyilladavara aṅgaḷava meṭṭalāgadu. Jaṅgamaprēmavilladavaroḍane mātanāḍalāgadu prasāda prasannikeyilladavara sahapaṅktiyalli kuḷḷiralāgadu. Idu kāraṇa, kūḍalacennasaṅgayyā nīvu sākṣiyāgi caturvidha sannahitaralladavara meccaru nim'ma śaraṇaru.