•  
  •  
  •  
  •  
Index   ವಚನ - 1006    Search  
 
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ, ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ ಪಿಂಡದಲ್ಲಿ ಲಿಂಗಸಾಹಿತ್ಯ-ಪ್ರಾಣದಲ್ಲಿ ಜಂಗಮಸಾಹಿತ್ಯ, ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ ಪ್ರಸಾದಸಾಹಿತ್ಯ. ಪ್ರಾಣಲಿಂಗಪ್ರಸಾದವಿರಹಿತನಾಗಿ ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ. ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ.
Transliteration Ādiyalli piṇḍa anādiyalli prāṇa, eraḍanu sadgurusvāmi ēkārthava māḍidalli piṇḍadalli liṅgasāhitya-prāṇadalli jaṅgamasāhitya, ī eraḍara ēkārthada koneya moneya mēle prasādasāhitya. Prāṇaliṅgaprasādavirahitanāgi ōgara prasādavendu koṇḍare kilbiṣa. Kūḍalacennasaṅgamadēva huḷugoṇḍadallikkuva.