•  
  •  
  •  
  •  
Index   ವಚನ - 1022    Search  
 
ಆಯುತವಿಲ್ಲದ ಅನುಭಾವ, ಸ್ವಾಯತವಿಲ್ಲದ ಸಮಾಧಾನ, ಸನ್ನಹಿತವಿಲ್ಲದ ಸಂಬಂಧವ ಏನೆನಬಹುದಯ್ಯಾ? ಘನಮನವ ಭೇದಿಸಿ, ಆದಿಯು ಅನಾದಿಯನೊಳಕೊಂಡು ಆಧಾರವಿಲ್ಲದ ನಿಲವು ಸಾಧ್ಯವಾಯಿತ್ತು ನೋಡಾ. ಕೂಡಲಚೆನ್ನಸಂಗಮದೇವರ ಶರಣ ಪ್ರಭುದೇವರು ಅಜಾತರೆಂಬ ಭೇದವೆನಗಿಂದು ತಿಳಿಯಿತ್ತು.
Transliteration Āyutavillada anubhāva, svāyatavillada samādhāna, sannahitavillada sambandhava ēnenabahudayyā? Ghanamanava bhēdisi, ādiyu anādiyanoḷakoṇḍu ādhāravillada nilavu sādhyavāyittu nōḍā. Kūḍalacennasaṅgamadēvara śaraṇa prabhudēvaru ajātaremba bhēdavenagindu tiḷiyittu.