ಇಲ್ಲದ ಸಂಸಾರ ಕಣ್ಣ ಮುಂದೆ
ರೂಪಾಗಿ ಕಾಡುತ್ತಿರ್ದಡೆ,
ಸುಜ್ಞಾನವೆಂಬ ಅಂಜನವ ಹಚ್ಚಿ,
ಸಕಲಭ್ರಮೆಯೆಂಬ ಕತ್ತಲೆಯ ಕಳೆದು,
ನಿಜಲಿಂಗಸಂಬಂಧವ ನೆಲೆಗೊಳಿಸಿ,
ನಿತ್ಯದಲ್ಲಿ ಅಚ್ಚೊತ್ತಿದನಾಗಿ,
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವಿನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು.
Transliteration Illada sansāra kaṇṇa munde
rūpāgi kāḍuttirdaḍe,
sujñānavemba an̄janava hacci,
sakalabhrameyemba kattaleya kaḷedu,
nijaliṅgasambandhava nelegoḷisi,
nityadalli accottidanāgi,
kūḍalacennasaṅgayyanalli prabhuvina śrīpādakke
namō namō embenu.