•  
  •  
  •  
  •  
Index   ವಚನ - 1081    Search  
 
ಎನ್ನಾಧಾರಚಕ್ರಕ್ಕೆ `ನ' ಕಾರವಾದಾತ ಬಸವಣ್ಣ; ಎನ್ನ ಸ್ವಾಧಿಷ್ಠಾನಚಕ್ರಕ್ಕೆ `ಮ'ಕಾರವಾದಾತ ಬಸವಣ್ಣ; ಎನ್ನ ಮಣಿಪೂರಕ ಚಕ್ರಕ್ಕೆ `ಶಿ'ಕಾರವಾದಾತ ಬಸವಣ್ಣ: ಎನ್ನ ಅನಾಹತಚಕ್ರಕ್ಕೆ `ವಾʼಕಾರವಾದಾತ ಬಸವಣ್ಣ; ಎನ್ನ ವಿಶುದ್ಧಿಚಕ್ರಕ್ಕೆ `ಯ'ಕಾರವಾದಾತ ಬಸವಣ್ಣ; ಎನ್ನ ಆಜ್ಞಾಚಕ್ರಕ್ಕೆ `ಓಂ'ಕಾರವಾದಾತ ಬಸವಣ್ಣ; ಎನ್ನ ಬ್ರಹ್ಮರಂಧ್ರಕ್ಕೆ ಸಾವಿರದೈವತ್ತೆರಡಕ್ಷರವಾದಾತ ಬಸವಣ್ಣ; ಎನ್ನ ಶಿಖಾಚಕ್ರಕ್ಕೆ `ಕ್ಷ'ಕಾರವಾದಾತ ಬಸವಣ್ಣ; ಎನ್ನ ಪಶ್ಚಿಮಚಕ್ರಕ್ಕೆ `ಹ'ಕಾರವಾದಾತ ಬಸವಣ್ಣ; ಇಂತೀ ಎನ್ನ ನವಚಕ್ರಂಗಳಲ್ಲಿಯೂ, ನವನಾಳಗಳಲ್ಲಿಯೂ ನವವಿಧಲಿಂಗಸ್ವರೂಪವಾದಾತ ಬಸವಣ್ಣ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲೈ ನಿಮ್ಮ ತೋರಿ ಎನ್ನ ಸಲಹಿದ ವರಗುರು ಸಂಗನಬಸವಣ್ಣ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ ಪ್ರಭುವೆ.
Transliteration Ennādhāracakrakke `na' kāravādāta basavaṇṇa; enna svādhiṣṭhānacakrakke `ma'kāravādāta basavaṇṇa; enna maṇipūraka cakrakke `śi'kāravādāta basavaṇṇa: Enna anāhatacakrakke `vāʼkāravādāta basavaṇṇa; enna viśud'dhicakrakke `ya'kāravādāta basavaṇṇa; enna ājñācakrakke `ōṁ'kāravādāta basavaṇṇa; enna brahmarandhrakke sāviradaivatteraḍakṣaravādāta basavaṇṇa; enna śikhācakrakke `kṣa'kāravādāta basavaṇṇa; enna paścimacakrakke `ha'kāravādāta basavaṇṇa; intī enna navacakraṅgaḷalliyū, navanāḷagaḷalliyū Navavidhaliṅgasvarūpavādāta basavaṇṇa. Idu kāraṇa kūḍalacennasaṅgayyanallai nim'ma tōri enna salahida varaguru saṅganabasavaṇṇa śrīpādakke śaraṇendu badukidenu kāṇā prabhuve.