•  
  •  
  •  
  •  
Index   ವಚನ - 1108    Search  
 
ಕಂಗಳ ನೋಟ ಹೃದಯದ ಜ್ಞಾನ, ಮನದೊಳಗೆ ಮಾತನಾಡುತಿರ್ದೆನಯ್ಯಾ! ಜೇನ ಮಳೆಗಳು ಕರೆದವು, ಅಮೃತದ ಬಿಂದುಗಳು ಸುರಿದವು, ಕೂಡಲಚೆನ್ನಸಂಗನೆಂಬ ರಸಸಾಗರದೊಳಗೋಲಾಡುತಿರ್ದೆನಯ್ಯಾ.
Transliteration Kaṅgaḷa nōṭa hr̥dayada jñāna, manadoḷage mātanāḍutirdenayyā! Jēna maḷegaḷu karedavu, amr̥tada bindugaḷu suridavu, kūḍalacennasaṅganemba rasasāgaradoḷagōlāḍutirdenayyā.