•  
  •  
  •  
  •  
Index   ವಚನ - 1124    Search  
 
ಕವಿತ್ವ ಸಾಧಕರೆಲ್ಲರೂ ಕಳವಳಿಸಿ ಹೋದರು, ವಿದ್ಯಾಸಾಧಕರೆಲ್ಲರೂ ಬುದ್ಧಿಗೆಟ್ಟುರು, ತತ್ತ್ವ ಸಾಧಕರೆಲ್ಲರೂ ಭಕ್ತಿಹೀನರಾದರು, ಲಿಂಗಸಾಧಕರೆಲ್ಲರೂ ಭೂಭಾರಕರಾದರು, ಕೂಡಲಚೆನ್ನಸಂಗಮದೇವಯ್ಯಾ ನಿಮ್ಮ ಬಸವಣ್ಣ ಜಂಗಮಸಾಧಕನಾಗಿ ಸ್ವಯಲಿಂಗವಾದನು.
Transliteration Kavitva sādhakarellarū kaḷavaḷisi hōdaru, vidyāsādhakarellarū bud'dhigeṭṭuru, tattva sādhakarellarū bhaktihīnarādaru, liṅgasādhakarellarū bhūbhārakarādaru, kūḍalacennasaṅgamadēvayyā nim'ma basavaṇṇa jaṅgamasādhakanāgi svayaliṅgavādanu.