•  
  •  
  •  
  •  
Index   ವಚನ - 1136    Search  
 
ಕಾಯಪಲ್ಲಟದ ಹೆಸರಲ್ಲಿ ಅನುಮಿಷನಲ್ಲಮನಾಗಿ ತನ್ನ ಲಿಂಗವ ತಾನೆ ಮರ್ತ್ಯಕ್ಕೆ ತಂದ. ಕಾಯಪಲ್ಲಟದ [ಹೆಸರಲ್ಲಿ] ಪೌಲಸ್ತ್ಯನು ಸಕಳೇಶ್ವರ ಮಾದಿರಾಜನಾಗಿ ತನ್ನ ಲಿಂಗವ ತಾನೆ ಮರ್ತ್ಯಕ್ಕೆ ತಂದ. ಕಾಯಪಲ್ಲಟದ [ಹೆಸರಲ್ಲಿ] ವಿಷ್ಣು ದಶಾವತಾರಕ್ಕೆ ಬಂದು ಸಿಕ್ಕಿದ, ಸಿದ್ಧರಾಮಯ್ಯನಾಗಿ ತನ್ನ ದಿವ್ಯದೇಹವ ತಾನೆ ಮರ್ತ್ಯಕ್ಕೆ ತಂದ. ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಶರಣನ ಉಪಮಿಸಬಾರದು, ಉಪಮಾತೀತನು.
Transliteration Kāyapallaṭada hesaralli anumiṣanallamanāgi tanna liṅgava tāne martyakke tanda. Kāyapallaṭada [hesaralli] paulastyanu sakaḷēśvara mādirājanāgi tanna liṅgava tāne martyakke tanda. Kāyapallaṭada [hesaralli] viṣṇu daśāvatārakke bandu sikkida, sid'dharāmayyanāgi tanna divyadēhava tāne martyakke tanda. Idu kāraṇa- kūḍalacennasaṅgayyanalli śaraṇana upamisabāradu, upamātītanu.