•  
  •  
  •  
  •  
Index   ವಚನ - 1180    Search  
 
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವ ಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನ[ವ]ಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ: "ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ| ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಮ್|| ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ| ಶ್ವಾನಯೋನಿಶತಂ ಗತ್ವಾಚಾಂಡಾಲಗೃಹಮಾವಿಶೇತ್|| ಚರಶೇಷಪರಿತ್ಯಾಗಾದ್ಯೋಜನಾದ್ಭಕ್ತನಿಂದಕಾಃ| ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಮ್"|| ಇಂತೆಂದುದಾಗಿ, ಇದು ಕಾರಣ ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು, ಅವರೀರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
Transliteration Gurukāruṇyavaṁ paḍedu aṅgada mēle liṅgasāhityavāda baḷika bhaktanāgali jaṅgamanāgali bhakti bhr̥tyācāra sampannarāgi guruliṅga jaṅgamavanārādhisi, prasādava koṇḍu nijamuktarāgalariyade paramapāvana[va]ppa gururūpa hottu matte tāvu parasamayadante dūṣaka nindaka paravādigaḷāgi bhakta jaṅgama prasādavanen̄jalendu atigaḷedu tottu sūḷeyaren̄jala tindu matte nā ghana tā ghanavendu satya sadbhaktayaktarāda bhaktajaṅgamava jaredu, avara kulavetti keḍenuḍidu holati mādigittiyariguruḷi halavu daivaden̄jalatindu matte tāvu kulajarendu Baguḷuva hole jaṅguḷigaḷellaru ī guru koṭṭaliṅgaviralu adanariyade śrīśaila, hampi, kāśi, kētāra gayā prayāga rāmēśvara ādiyāda holekṣētraṅgaḷalli āsaktarāgi hōgi allalliya bhaviśaivadaivaṅgaḷa darśana sparuśana ārādhanegaḷa māḍi avakke śaraṇendu avaren̄jala tindu ā kṣētraṅgaḷalli āśramastharāgirdu gatipada muktiya paḍevenemba vēṣadhārigaḷellaru śvapacagr̥hada śvānayōnigaḷalli śatasahasravēḷe bappudu tappudu. Adentendoḍe: Idaṁ tīrthamidaṁ tīrthaṁ bhramanti tāmasā narāḥ| śivajñānēna jānanti sarvatīrthanirarthakam|| Prāṇaliṅgamaviśvāsya tīrthaliṅgantu viśēṣataḥ| śvānayōniśataṁ gatvācāṇḍālagr̥hamāviśēt|| caraśēṣaparityāgādyōjanādbhaktanindakāḥ| an'yapaṇyāṅganōcciṣṭaṁ bhun̄jayantirauravam|| intendudāgi, idu kāraṇa intappa anācārigaḷu bhakta jaṅgama sthalakke sallaru, avarīrvanu kūḍalacennasaṅgayya sūrya-candraruḷḷannakka nāyakanarakadallikkuva.