•  
  •  
  •  
  •  
Index   ವಚನ - 1189    Search  
 
ಗುರುಪದವ ಮಹತ್ತುಪದವೆಂದು ನುಡಿದು, ನಡೆಯಲರಿಯದ ತುಡುಗುಣಿಗಳು ನೀವು ಕೇಳಿರೊ; ಗುರುಪದವಾವುದೆಂಬುದರಿಯಿರಿ, ಮಹತ್ತುಪದವಾವುದೆಂಬುದ ಮುನ್ನವೆ ಅರಿಯಿರಿ. ಆಚಾರಂ ಗುರುಪದ-ಎಂಬುದನರಿದು, ಅಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನತಿಗಳೆದು, ಈಷಣತ್ರಯವೆಂಬ ವಾಸನೆಯ ಹೊದ್ದದೆ, ದಾಸಿ, ವೇಸಿ, ಪರಸ್ತ್ರೀಯರ ಸಂಗವೆಂಬ ಹೇಸಿಕೆಯ ಮನದಲ್ಲಿ ನೆನೆಯದೆ, ಪತಿತಾಶ್ರಮಾಶ್ರಿತನಾಗದೆ, ಭವಭಾರಿ ಶೈವಕ್ಷೇತ್ರಂಗಳಂ ಹೊದ್ದದೆ, ಭವಿಶೈವದೈವಂಗಳನಾರಾಧಿಸದೆ, ಭವಿಯನಾಶ್ರಯಿಸದೆ, ಭವಿಸಂಗ, ಭವಪಙ್ತಿ, ಭವಿದೃಷ್ಟಿ, ಭವಿಗೇಹಾನ್ನ, ಭವಿತತ್ಸಂಭಾಷಣೆಯಂ ಬಿಟ್ಟು ಭಕ್ತಾಚಾರ ಸದಾಚಾರವಾಗಿಪ್ಪುದೆ ಗುರುಪದ. ಇನ್ನು ಮಹತ್ತುಪದವಾವುದೆಂದಡೆ; “ಷಟ್ಸ್ಥಲಾಚಾರೋದ್ಧಾರಂ ಮನ್ಮತ್ವಂ ತು ಕಥ್ಯತೇʼ ಎಂದುದಾಗಿ, ಗುರುಲಿಂಗ ಜಂಗಮಲಿಂಗ ಪಾದೋದಕ ಪ್ರಸಾದ ಭಕ್ತಾಚಾರಂಗಳನುದ್ಧರಿಸುತ್ತ, ಎಲ್ಲಿ ಗುರು, ಎಲ್ಲಿ ಲಿಂಗ, ಎಲ್ಲಿ ಜಂಗಮ, ಎಲ್ಲಿ ಪಾದೋದಕ, ಎಲ್ಲಿ ಪ್ರಸಾದ, ಎಲ್ಲಿ ಭಕ್ತಾಚಾರವಿದ್ದಲ್ಲಿಯೇ ಹೊಕ್ಕು, ಅವರೊಕ್ಕುದ ಕೊಂಡು ನಡೆಯಬಲ್ಲಡೆ ಮಹತ್ತುಪದ, ಇನಿತಿಲ್ಲದೆ ಗುರುವನತಿಗಳೆದು ಗುರುದ್ರೋಹಿಗಳಾಗಿ, ಲಿಂಗವನತಿಗಳೆದು ಲಿಂಗದ್ರೋಹಿಗಳಾಗಿ, ಜಂಗಮವನತಿಗಳೆದು ಜಂಗಮದ್ರೋಹಿಗಳಾಗಿ, ಆಚಾರವನತಿಗಳೆದು ಭಕ್ತಾಚಾರದ್ರೋಹಿಗಳಾಗಿ, ಹೊನ್ನು ಹೆಣ್ಣು ಮಣ್ಣಿಗಾಗಿ ಹೊರವೇಷವ ತೊಟ್ಟು, ಭಕ್ತಜಂಗಮದ ಅರ್ಥಪ್ರಾಣಂಗಳಿಗಳುಪಿ, ತೊತ್ತು ಸೊಳೆಯರೆಂಜಲ ತಿಂದು, ಮತ್ತೆ ಗುರುಪದ ಮಹತ್ತುಪದವೆಂದು ತಪ್ಪಿ ಬಗಳುವ ಶ್ವಾನಜಂಗುಳಿಗಳ ಜಂಗಮವೆಂದಾರಾಧಿಸಿ, ಪ್ರಸಾದವ ಕೊಳ್ಳ ಸಲ್ಲದು ಕಾಣಾ, ಕೂಡಲಚೆನ್ನಸಂಗಮದೇವಾ.
Transliteration Gurupadava mahattupadavendu nuḍidu, naḍeyalariyada tuḍuguṇigaḷu nīvu kēḷiro; gurupadavāvudembudariyiri, mahattupadavāvudembuda munnave ariyiri. Ācāraṁ gurupada-embudanaridu, aṇavamala māyāmala kārmikamalavemba malatrayaṅgaḷanatigaḷedu, īṣaṇatrayavemba vāsaneya hoddade, dāsi, vēsi, parastrīyara saṅgavemba hēsikeya manadalli neneyade, patitāśramāśritanāgade, bhavabhāri śaivakṣētraṅgaḷaṁ hoddade, bhaviśaivadaivaṅgaḷanārādhisade, bhaviyanāśrayisade, bhavisaṅga, bhavapaṅti, bhavidr̥ṣṭi, bhavigēhānna, Bhavitatsambhāṣaṇeyaṁ biṭṭu bhaktācāra sadācāravāgippude gurupada. Innu mahattupadavāvudendaḍe; “ṣaṭsthalācārōd'dhāraṁ manmatvaṁ tu kathyatēʼ endudāgi, guruliṅga jaṅgamaliṅga pādōdaka prasāda bhaktācāraṅgaḷanud'dharisutta, elli guru, elli liṅga, elli jaṅgama, elli pādōdaka, elli prasāda, elli bhaktācāraviddalliyē hokku, avarokkuda koṇḍu naḍeyaballaḍe mahattupada, initillade guruvanatigaḷedu gurudrōhigaḷāgi, liṅgavanatigaḷedu liṅgadrōhigaḷāgi, Jaṅgamavanatigaḷedu jaṅgamadrōhigaḷāgi, ācāravanatigaḷedu bhaktācāradrōhigaḷāgi, honnu heṇṇu maṇṇigāgi horavēṣava toṭṭu, bhaktajaṅgamada arthaprāṇaṅgaḷigaḷupi, tottu soḷeyaren̄jala tindu, matte gurupada mahattupadavendu tappi bagaḷuva śvānajaṅguḷigaḷa jaṅgamavendārādhisi, prasādava koḷḷa salladu kāṇā, kūḍalacennasaṅgamadēvā.