•  
  •  
  •  
  •  
Index   ವಚನ - 1207    Search  
 
ಗುರುವಾದಡೂ ತನ್ನ ಶಿಷ್ಯನ ಕೈಯಿಂದ ಜಂಗಮಕ್ಕೆ ಸೇವೆಯ ಮಾಡಿಸದೆ, ತಾ ಮಾಡಿಸಿಕೊಂಡನಾದಡೆ ಶ್ವಾನ ಒಡಲ ಹೊರೆದಂತೆ. ಅದು ಹೇಗೆಂದಡೆ: ತನ್ನ ಲಿಂಗವನಾ ಶಿಷ್ಯಂಗೆ ಕೊಟ್ಟು, ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಜಂಗಮವೆ ಸಾಕ್ಷಿಯಾಗಿರ್ದು ವಿಭೂತಿವೀಳೆಯವ ತೆಗೆದುಕೊಂಡು ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳೆದರಾಗಿ, ಆ ಜಂಗಮಕ್ಕೆ ಮಾಡಿಸುವುದು. ಗುರುವಾದಡಾಗಲಿ ಲಿಂಗವಾದಡಾಗಲಿ ಜಂಗಮ ತಾನಾದಡೂ ಆಗಲಿ ಜಂಗಮ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ. ಅವರು ಬರುಕಾಯರೆಂಬೆ, ಬರುಮುಖಿಗಳೆಂಬೆ, ಅಂಗಹೀನರೆಂಬೆ ಲಿಂಗಹೀನರೆಂಬೆ. ಜಂಗಮದಲ್ಲಿ ಗುಣವ ನೋಡದೆ, ಅವಗುಣವ ನೋಡದೆ ರೂಪ ನೋಡದೆ, ನಿರೂಪವ ನೋಡದೆ, ಕೋಪವ ನೋಡದೆ, ಶಾಂತವ ನೋಡದೆ, ವಿವೇಕವ ನೋಡದೆ, ಅವಿವೇಕವ ನೋಡದೆ, ಮಲಿನವ ನೋಡದೆ, ಅಮಲಿನವ ನೋಡದೆ, ರೋಗವ ನೋಡದೆ, ನಿರೋಗವ ನೋಡದೆ, ಕುಲವ ನೋಡದೆ, ಛಲವ ನೋಡದೆ, ಆಶೆಯ ನೋಡದೆ, ನಿರಾಶೆಯ ನೋಡದೆ, ಅಂಗದ ಮೇಲಣ ಲಿಂಗವನೆ ನೋಡಿ, ಜಂಗಮಕ್ಕೆ ಮಾಡಿ ನೀಡಿ, ಪಾದೋದಕ ಪ್ರಸಾದವ ಕೊಂಬ ಶರಣನ ಬಸವಣ್ಣನೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.
Transliteration Guruvādaḍū tanna śiṣyana kaiyinda jaṅgamakke sēveya māḍisade, tā māḍisikoṇḍanādaḍe śvāna oḍala horedante. Adu hēgendaḍe: Tanna liṅgavanā śiṣyaṅge koṭṭu, tānu vratagēḍiyāgi hōhalli, ā jaṅgamave sākṣiyāgirdu vibhūtivīḷeyava tegedukoṇḍu guru śiṣyaribbara pūrvāśrayava kaḷedarāgi, ā jaṅgamakke māḍisuvudu. Guruvādaḍāgali liṅgavādaḍāgali jaṅgama tānādaḍū āgali jaṅgama pādōdaka prasādavilladavaranollenolle. Avaru barukāyarembe, barumukhigaḷembe, aṅgahīnarembe liṅgahīnarembe. Jaṅgamadalli guṇava nōḍade, avaguṇava nōḍade rūpa nōḍade, nirūpava nōḍade, kōpava nōḍade, śāntava nōḍade, vivēkava nōḍade, avivēkava nōḍade, malinava nōḍade, amalinava nōḍade, rōgava nōḍade, nirōgava nōḍade, kulava nōḍade, chalava nōḍade, āśeya nōḍade, nirāśeya nōḍade, aṅgada mēlaṇa liṅgavane nōḍi, jaṅgamakke māḍi nīḍi, pādōdaka prasādava komba śaraṇana basavaṇṇanembe kāṇā kūḍalacennasaṅgamadēvā.